ವೀರಶೈವಾಗಮ

samadi
Published on
ಅಂತರ್ದಶಾಹೇ ದಶೋ ವಾ ಸಂಕ್ರಾಂತಿರ್ವಾ ಭವೇದ್ಯದಿ | ತದಾ ಸಮಾಪಯೇದನ್ಯಃ ಸುತಸ್ತು ನ ಸಮಾಪಯೇತ್ ||

ತಂದೆಯ ಸಮಾಧಿ ನಂತರ ಆಚರಿಸಲಾಗುವ ಹತ್ತು ದಿನಗಳವರೆಗಿನ ಉತ್ತರ ಕ್ರಿಯೆಗಳ ದಿನಗಳಲ್ಲಿ ಒಂದು ವೇಳೆ ಅಮಾವಾಸ್ಯೆ ಅಥವಾ ಸಂಕ್ರಾಂತಿಯು ಬಂದರೆ, ಆಗ ಇತರರು ಆ ಉತ್ತರ ಕ್ರಿಯೆಯ ಆರಾಧನೆಯನ್ನು ಆ ದಿನದಂದೇ ಮುಗಿಸಬೇಕು. ಆದರೆ ಮಗನಾದವನು ಮಾತ್ರ ಮಧ್ಯದಲ್ಲಿ ಮುಗಿಸಬಾರದು.

ಸಾಮಾನ್ಯವಾಗಿ ಉತ್ತರ ಕ್ರಿಯೆಯ ಪೂಜಾದಿಗಳನ್ನು ಮೃತ ವ್ಯಕ್ತಿಯ ಮಗನ ಜೊತೆಗೆ ಉಳಿದೆಲ್ಲ ಪರಿವಾರದವರೂ ಆಚರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಗನನ್ನು ಬಿಟ್ಟು ಉಳಿದ ಬಂಧುಗಳು ಹತ್ತು ದಿನಗಳ ಉತ್ತರಕ್ರಿಯೆಗಳನ್ನು ಆಚರಿಸುವಾಗ ಮಧ್ಯದಲ್ಲಿ ಅಮವಾಸ್ಯೆ ಅಥವಾ ಸಂಕ್ರಾಂತಿಯು ಬಂದರೆ, ಆ ದಿನದಂದೇ ಮುಗಿಸಬೇಕು. ಆದರೆ ಮೃತ ವ್ಯಕ್ತಿಯ ಮಗನಿಗೆ ಈ ನಿಯಮ ಅನ್ವಯಿಸುವುದಿಲ್ಲ, ಅವನು ಹತ್ತು ದಿನಗಳ ಕಾಲ ಉತ್ತರಕ್ರಿಯೆಗಳನ್ನು ಪೂರ್ಣವಾಗಿ ಆಚರಿಸಬೇಕು.

| ಮುಕುಟಾಗಮ (ಚರ್ಯಾಪಾದ -5. 17/) ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net