ವೀರಶೈವಾಗಮ

shivalinga
Published on
ಮೃದ್ಧಟ್ಟನಾದಿವ್ಯಾಪಾರಜಾತತಾಪೋಪಶಾಂತಯೇ ಕ್ಷೀರೇಣ ತರ್ಪಯೇದಿಷ್ಟಲಿಂಗಾದೀನಿ ಮಹೇಶ್ವರ || ಪಿತ್ರೇ ದದ್ಯಾದನುದಿನಂ ತ್ರಿಸಂಖ್ಯಾನುದಕಾಂಜಲೀನ್ | ವಾಸೋದಕಾದಿಕಂ ನೈವ ದೇಯಂ ಪಿತೃಹಿತೈಷಿಣಾ ||

ಸಮಾಧಿ ಮಾಡುವ ಸಂದರ್ಭದಲ್ಲಿ ತನ್ನ ತಂದೆ ಮೊದಲಾದವರ ಮೃತ ದೇಹದ ಮೇಲೆ ಮಣ್ಣು ಹಾಕುವುದರಿಂದ ಉಂಟಾದ ತಾಪವನ್ನು ಶಾಂತಗೊಳಿಸಲು ಇಷ್ಟಲಿಂಗವೇ ಮೊದಲಾದವುಗಳನ್ನು ಹಾಲಿನಿಂದ ಅಭಿಷೇಕ ಮಾಡಬೇಕು. ಜೀವಂತವಾಗಿದ್ದವರ ಮತ್ತು ಮೃತರಾದವರ ಎಲ್ಲ ಆತ್ಮಗಳ ಮೂಲವೇ ಆ ಪರಮಾತ್ಮವಾಗಿರುವುದರಿಂದ ಮತ್ತು ಆ ಪರಮಾತ್ಮನ ಸಾಕಾರ ರೂಪವೇ ಈ ಇಷ್ಟಲಿಂಗವಾಗಿರುವುದರಿಂದ ಇದಕ್ಕೆ ಅಭಿಷೇಕ ಮಾಡಿದರೆ ಎಲ್ಲರ ತಾಪಗಳು ಶಾಂತವಾಗುತ್ತವೆ. ಮೃತನಾದ ತಂದೆಯ ಹೆಸರಿನಿಂದ ಮಗನು ಪ್ರತಿದಿನವೂ ಮೂರು ಬೊಗಸೆ ನೀರನ್ನು ತರ್ಪಣವನ್ನಾಗಿ ಕೊಡಬೇಕು. ತಂದೆಯ ಹಿತೈಷಿಯಾದ ಮಗನು ವಾಸೋದಕವನ್ನು ಎಂದಿಗೂ ತರ್ಪಣವನ್ನಾಗಿ ಕೊಡಬಾರದು. ವಾಸೋದಕವೆಂದರೆ ಬಟ್ಟೆಯನ್ನು ಹಿಂಡಿದಾಗ ಹೊರ ಹೊಮ್ಮುವ ನೀರು ಎಂದರ್ಥ. ತಾನು ತನ್ನ ದೈನಂದಿನ ಬಳಕೆಗೆ ಉಪಯೋಗಿಸುವ ಉತ್ತಮ ನೀರನ್ನು ತರ್ಪಣವಾಗಿ ಕೊಡಬೇಕೆ ಹೊರತು ಕಲುಷಿತವಾದ ಯಾವುದೇ ನೀರನ್ನು ಅದಕ್ಕೆ ಬಳಸಬಾರದು.

| ಮುಕುಟಾಗಮ (ಚರ್ಯಾಪಾದ -5. 4/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net