ವೀರಶೈವಾಗಮ

shiva
Published on
ತತಶ್ಚ ಕರ್ಮಮಂತ್ರಾಣಿ ಶ್ರಾವಯೇಯುಃ ಸುತಾದಯಃ | ಷಡಕ್ಷರಂ ದಕ್ಷಕರ್ಣೆ ನಿಷಧಶ್ಒ್ಯೆವ ಶಾಶ್ವತೀಃ || ತತ ಉತ್ಕ್ರಾಂತಿವೇಲಾಯಾಂ ಕರ್ಪರಂ ಜ್ವಾಲಯೇದಪಿ | ಅಣುಃ ಪಂಥೇತ್ಯರ್ಚಿರಾದಿಗತ್ಯರ್ಥಂ ಮಂತ್ರಮುಚ್ಚರನ್ ||

ಉತ್ರಮಣ ಹೊಂದುವ ವ್ಯಕ್ತಿಯು ಅಂತ್ಯಕಾಲದಲ್ಲಿ ಶಿವನಾಮವನ್ನು ಜಪಿಸುತ್ತ ಕ್ರಮೇಣ ದೇಹಾವಸಾನದ ಅಂತಿಮ ಸಮಯ ಸಮೀಪಿಸಿದಾಗ ಆ ಶಿವಭಕ್ತನ ಮಕ್ಕಳು ಹಾಗೂ ಇತರ ಬಂಧುಗಳು ಕೂಡ ಕರ್ಮ ಮಂತ್ರವನ್ನು ಉಚ್ಚರಿಸಬೇಕು ಮತ್ತು ಬಲಗಿವಿಯಲ್ಲಿ ಷಡಕ್ಷರ ಮಂತ್ರವನ್ನು ಮತ್ತು ಶಾಶ್ವತವಾಗಿ ಮಂಗಳವನ್ನುಂಟುಮಾಡುವ ಉಪನಿಷತ್ತುಗಳ ಮಂತ್ರಗಳನ್ನು ಜಪಿಸಬೇಕು.

ಇದಲ್ಲದೇ ಪ್ರಾಣ ಬಿಡುವ ಸಂದರ್ಭದಲ್ಲಿ ‘ಅಣುಃ ಪಂಥಾಃ’ ಇತ್ಯಾದಿ ಮಂತ್ರವನ್ನುಚ್ಚರಿಸುತ್ತಾ ಕರ್ಪರವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಆ ಶಿವಭಕ್ತನಿಗೆ ‘ಅರ್ಚಿಸ್’ ಮುಂತಾದ ಶ್ರೇಷ್ಠ ಪದವಿಗಳು ಪ್ರಾಪ್ತವಾಗುತ್ತವೆ. ಒಮ್ಮೊಮ್ಮೆ ದೇಹಾವಸಾನ ಸಮಯದಲ್ಲಿ ಕೂಡ ಕಿವಿಯು ಕೆಲಸ ಮಾಡುತ್ತಿರುತ್ತದೆ. ಹೀಗೆ ಸಮೀಪವರ್ತಿಗಳು ಶಿವ ಮಂತ್ರ ಮುಂತಾದವುಗಳ ಜಪ ಮಾಡುವುದರಿಂದ ಶಬ್ದವು ಅವನ ಕಿವಿಯ ಮೂಲಕ ಬುದ್ಧಿಯನ್ನು ಪ್ರವೇಶಿಸಿ ಶಿವಾಕಾರವೃತ್ತಿಯನ್ನು ತಾಳಲು ಅನುಕೂಲವಾಗುತ್ತದೆ.

| ಮುಕುಟಾಗಮ (ಚರ್ಯಾಪಾದ) 2. 36-37/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net