ವೀರಶೈವಾಗಮ

Untitled design (4)
Published on

ನಾಸ್ತಿ ನಿರ್ವಲ್ಯತಾದೋಷಃ ಸೌವರ್ಣೆಷು ಸುಮೇಷ್ವಪಿ | ಪತ್ರೇಷು ಚ ತತಸೆôಸ್ತು ಭಕ್ತೋ ನಿತ್ಯಂ ಸಮರ್ಚಯೇತ್ || ಸೌವರ್ಣಪತ್ರಪುಷ್ಪಾಣಾಂ ತಥಾ ಬಿಲ್ವದಲಸ್ಯ ಚ| ನ ಪರ್ಯುಷಿತತಾ ತಸ್ಮಾತ್ ತಾನಿ ಸಂಗೃಹ್ಯ ಪೂಜಯೇತ್ ||

ಸಾಮಾನ್ಯವಾಗಿ ಪ್ರಕೃತಿದತ್ತವಾದ ಹೂ ಮತ್ತು ಪತ್ರೆಗಳನ್ನು ಒಮ್ಮೆ ಪೂಜೆಯಲ್ಲಿ ಉಪಯೋಗಿಸಿದ ನಂತರ ಎರಡನೇ ಸಾರಿ ಪೂಜೆಯಲ್ಲಿ ಉಪಯೋಗಿಸಲು ಬರುವುದಿಲ್ಲ. ಏಕೆಂದರೆ ಅವು ನಿರ್ವಲ್ಯವೆಂಬ ದೋಷದಿಂದ ಕೂಡಿಕೊಳ್ಳುತ್ತವೆ. ಆದರೆ ಚಿನ್ನದಿಂದ ಮಾಡಿದ ಎಲೆ ಮತ್ತು ಹೂಗಳು ನಿರ್ವಲ್ಯತಾ ದೋಷದಿಂದ ಕೂಡುವುದಿಲ್ಲ. ಒಮ್ಮೆ ಪೂಜಿಸಿದ ನಂತರ ಅವುಗಳಿಂದಲೇ ಮತ್ತೆ ಮತ್ತೆ ಪೂಜೆ ಮಾಡಬಹುದು. ಆದ್ದರಿಂದ ಶಿವಭಕ್ತನು ಪ್ರತಿದಿನವೂ ಅವುಗಳಿಂದ ಶಿವನನ್ನು ಪೂಜಿಸಬಹುದು. ಇದಲ್ಲದೇ ಪ್ರಕೃತಿದತ್ತವಾದ ಹೂಗಳು ಕಾಲ ಕಳೆದಂತೆ ಬಾಡುತ್ತ ಹೋಗುವಂತೆ ಚಿನ್ನದಿಂದ ಮಾಡಿದ ಎಲೆ, ಹೂಗಳು, ಮತ್ತು ಬಿಲ್ವಪತ್ರೆ ಇವು ಎಂದಿಗೂ ಹಳೆಯದಾಗುವುದಿಲ್ಲ ಅಥವಾ ಎಂಜಲಾಗುವುದಿಲ್ಲ. ಆದ್ದರಿಂದ ಒಮ್ಮೆ ಅವುಗಳನ್ನು ಸಂಗ್ರಹಿಸಿ ಪೂಜೆಗೆ ಉಪಯೋಗಿಸಿದ ನಂತರ ಇವುಗಳನ್ನು ತೆಗೆದು, ನೀರಿನಿಂದ ತೊಳೆದು ಮತ್ತೆ ಪೂಜೆಗೆ ಉಪಯೋಗಿಸಬಹುದಾಗಿದೆ.

| ಮುಕುಟಾಗಮ (4. 27-28)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net