ವೀರಶೈವಾಗಮ

shiva
Published on

ಸಮಾಧಿರ್ವೆಕ್ಷಧರ್ವೆಠಯಂ ಸರ್ವಧರ್ವಪವಾದಕಃ |

ಸಮಾಧಿಸಂಸ್ಕೃತೇ ತಸ್ಮಾದ್ಧರ್ಮಲೋಪೋ ನ ಶಂಕ್ಯತೇ ||

ಸಮಾಧಿಸಂಸ್ಕ್ರಿಯಾ ಸಾಕ್ಷಾನ್ಮತ್ಸಾನ್ನಿಧ್ಯಪ್ರದಾಯಿನೀ |

ದಹನಂ ಪ್ರಥಿತಂ ಲೋಕೇ ಪಿತೃಲೋಕೈಕಸಾಧಕಮ್ ||

ವೀರಶೈವರ ಸಮಾಧಿಸಂಸ್ಕಾರವು ಮೋಕ್ಷಪ್ರಾಪ್ತಿಗೆ ಉತ್ತಮವಾದ ವಿಧಿಯಾಗಿದೆ. ಶಿವನಲ್ಲಿ ನಿತಾಂತವಾದ ಶ್ರದ್ಧೆಯುಳ್ಳ ಶಿವಭಕ್ತನು ಜನ್ಮದಾರಭ್ಯ ಮರಣಪರ್ಯಂತರ ಆಗಾಗ ಪಡೆಯಬೇಕಾದ ಮತ್ತು ಧರ್ಮಶಾಸ್ತ್ರದಲ್ಲಿ ತಿಳಿಸಲಾದ ಇತರ ಸಂಸ್ಕಾರಗಳನ್ನು ಒಂದು ವೇಳೆ ಪಡೆಲಾಗದಿದ್ದರೂ, ಈ ಸಮಾಧಿವಿಧಿಯನ್ನು ಉತ್ತಮವಾಗಿ ನೆರವೇರಿಸಿದರೆ ಇದು ಮೋಕ್ಷದಾಯಕವಾಗುತ್ತದೆ. ಆದ್ದರಿಂದ ಇದು ಎಲ್ಲ ವಿಧವಾದ ಸಂಸ್ಕಾರಗಳಿಗೆ ಅಪವಾದವಾದುದು. ಯಾವ ಶಿವಭಕ್ತನಿಗೆ ಸಮಾಧಿ ಸಂಸ್ಕಾರವಾಗುತ್ತದೆಯೋ, ಅಂಥವನಿಗೆ ಧರ್ವಚರಣೆಯಲ್ಲಿ ಲೋಪವಾಯಿತೆಂದು ಸಂದೇಹಪಡಬಾರದು. ಸಮಾಧಿ ಸಂಸ್ಕಾರವು ಶಿವನ ಸಾನಿಧ್ಯವನ್ನು ಉಂಟುಮಾಡುವ ಪ್ರತ್ಯಕ್ಷವಾದ ಸಾಧನವಾಗಿದೆ. ಲೋಕದಲ್ಲಿ ಪ್ರಖ್ಯಾತವಾಗಿರುವ ದಹನ ಸಂಸ್ಕಾರ ವಿಧಿಯು ಪಿತೃಲೋಕವನ್ನು ಮಾತ್ರ ಪಡೆಯುವ ಸಾಧನವಾಗಿದೆ.

| ಮುಕುಟಾಗಮ (ಚರ್ಯಾಪಾದ) 1. 22-23/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net