ವೀರಶೈವಾಗಮ

shiva
Published on
ಶಾಂಭವವ್ರತನಿಷ್ಠಾನಾಂ ಪ್ರೇತತ್ವಂ ನಹಿ ವಿದ್ಯತೇ| ಪ್ರೇತತ್ವೇನ ವಿಮುಕ್ತಸ್ಯ ಕರ್ಮಲೋಪೋ ನ ಶಂಕ್ಯತೇ ||

ಲಿಂಗಭಾವಯುಜಾಮೇಷಾಮಪಸವ್ಯಂ ನ ಯುಜ್ಯತೇ |

ಅತಃ ಪ್ರೇತಕ್ರಿಯಾಃ ಸರ್ವಾಃ ಶಾಂಭವೇಷು ನ ಯೋಜಯೇತ್||

ಶಿವವ್ರತನಿಷ್ಠರಾದ ಸಾಧಕರಿಗೆ ಪ್ರೇತದ ಭಾವನೆಯು ಎಂದಿಗೂ ಉಂಟಾಗುವುದಿಲ್ಲ. ಪ್ರೇತಭಾವದಿಂದ ಅವರು ಬಿಡುಗಡೆ ಹೊಂದಿರುವುದರಿಂದ ಪ್ರೇತ ಕರ್ಮದ ಲೋಪದ ಪ್ರಶ್ನೆಯು ಉಂಟಾಗದು. ಯಾವ ಭಕ್ತನು ಲಿಂಗಭಾವದಿಂದ ಯುಕ್ತನಾಗಿರುವನೋ ಅಂಥವನಿಗೆ ಅಪಸವ್ಯ ಕರ್ಮವನ್ನು ಮಾಡುವುದು ಯೋಗ್ಯವಲ್ಲ. ಆದ್ದರಿಂದ ಶಿವವ್ರತವನ್ನು ನಿಷ್ಠೆಯಿಂದ ಆಚರಿಸುವ ಭಕ್ತರಿಗೆ ದೇಹಾವಸಾನದ ನಂತರ ಇತರರಿಗೆ ಮಾಡಲಾಗುವ ಯಾವುದೇ ರೀತಿಯ ಪ್ರೇತಕ್ರಿಯೆಗಳನ್ನು ಮಾಡಬೇಕಾದ ಅಗತ್ಯವಿರುವುದಿಲ್ಲ. ಅಪಸವ್ಯವೆಂದರೆ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡಲಾಗುವ ಒಂದು ವಿಶಿಷ್ಟವಾದ ವಿಧಿಯಾಗಿದೆ. ಯಜ್ಞೋಪವೀತವನ್ನು ಎಡ ಭುಜದಿಂದ ಬಲ ಭುಜಕ್ಕೆ ಬದಲಾಯಿಸುವ ಕ್ರಿಯೆಗೆ ‘ಅಪಸವ್ಯ’ ಎಂದು ಹೆಸರು. ಪವಿತ್ರವಾದ ಶಿವದಾರವನ್ನು ಈ ರೀತಿಯಾಗಿ ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ.

| ಮುಕುಟಾಗಮ (ಚರ್ಯಾಪಾದ) 1. 20-21/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net