

ಸರ್ವಸ್ಯ ಪ್ರತಿಶಿವ ಮತ್ತು ಭೂಮಿಸ್ತೋಯಸ್ಯ ಮುಂತಾದ ಶ್ರುತಿ ವಾಕ್ಯಗಳು ಭಕ್ತಿಭಾವದಿಂದ ಕೂಡಿರುವ ಯೋಗಿಗಳು ಶಿವೈಕ್ಯರಾದಾಗ ಅವರ ದೇಹವನ್ನು ಸಮಾಧಿ ಮಾಡಬೇಕೆಂದು ವಿಧಿಸುತ್ತವೆ. ಆದ್ದರಿಂದ ಸಮಾಧಿ ವಿಧಿಯು ನಿರಾಧಾರವಾಗಿರದೆ ಶ್ರುತಿಸಮ್ಮತವಾಗಿದೆ, ಅಂತೆಯೇ ಪ್ರಮಾಣಪೂರ್ಣವಾಗಿದೆ. ಈ ಸಂಸ್ಕಾರದ ಪ್ರಭಾವ ಮತ್ತು ಪರಿಣಾಮ ಎಷ್ಟಿರುತ್ತದೆಂದರೆ ಸದಾಚಾರ ಮತ್ತು ಸದ್ಗುಣಗಳಿಂದ ಕೂಡಿದ ಶಿವಭಕ್ತರ ದೇಹವನ್ನು ಈ ವಿಧಿಗೆ ಅನುಗುಣವಾಗಿ ಸಂಸ್ಕಾರ ಮಾಡಿದರೆ ಅವರು ಮುಕ್ತಿಯನ್ನು ಹೊಂದುತ್ತಾರೆ ಆದರೆ ಭಕ್ತಿಯಿಲ್ಲದವನೂ, ಜ್ಞಾನವಿಲ್ಲದವನೂ, ಮತ್ತು ದೊಡ್ಡ ಪಾಪದಿಂದ ಯುಕ್ತನಾದವನೂ ಶಿವಮೇಧ ವಿಧಿಯಿಂದ ಸಂಸ್ಕಾರ ಹೊಂದಿದರೆ ಅವರೂ ಶಿವಸಾಯುಜ್ಯವನ್ನು ಪಡೆಯುತ್ತಾರೆ.
| ಮುಕುಟಾಗಮ (ಚರ್ಯಾಪಾದ) 1. 11-12 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.