

ಶಿವೇ ಮಯಿ ಪ್ರವಿಷ್ಟಾನಾಂ ಮೇಧ ಆರಾಧನಾತ್ಮಕಃ|
ಶಿವಮೇಧ ಇತಿ ಖ್ಯಾತಃ ಕರಣೀಯೋ ಮುಮುಕ್ಷುಭಿಃ ||
ವಿಶಿಷ್ಟಃ ಪಿತೃಮೇಧೊ—ಯಂ ಶಿವಮೇಧ ಇತಿ ಸ್ಮೃತಃ ||
ಇಲ್ಲಿ ಶಿವಮೇಧ ಶಬ್ದದ ನಿರ್ವಚನವನ್ನು ತಿಳಿಸಲಾಗಿದೆ. ಶಿವೇ= ಶಿವನಲ್ಲಿ ಸಾಮರಸ್ಯ ಹೊಂದಿದ ಭಕ್ತರನ್ನು ಕುರಿತು, ಮೇಧ= ಆಚರಿಸುವ ಆರಾಧನಾ ರೂಪ ಕರ್ಮವು ‘ಶಿವಮೇಧ’ ಎಂದು ಪ್ರಸಿದ್ಧವಾಗಿದೆ. ಅಂದರೆ ಪರಶಿವನಲ್ಲಿ ಒಂದಾಗಿ ದೇಹತ್ಯಾಗ ಮಾಡಿದ ಶಿವಭಕ್ತನ ದೇಹಕ್ಕೆ ನೀಡುವ ಸಂಸ್ಕಾರ ಅಥವಾ ದೇಹತ್ಯಾಗ ಮಾಡಿದ ವ್ಯಕ್ತಿಯು ಶಿವಸಾಯುಜ್ವನ್ನು ಪಡೆಯಲೋಸುಗ ಅವನ ದೇಹಕ್ಕೆ ನೀಡುವ ವಿಶಿಷ್ಟವಾದ ಸಂಸ್ಕಾರ. ಮೋಕ್ಷವನ್ನು ಬಯಸುವವರು ಇದನ್ನು ಆಚರಿಸಬೇಕು. ವಿಶಿಷ್ಟವಾದ ಪಿತೃಮೇಧವನ್ನು ಇಲ್ಲಿ ಶಿವಮೇಧ ಎಂದು ಕರೆಯಲಾಗಿದೆ. ಶುಕ್ಲಯಜು ರ್ವೆದ ಮಾಧ್ಯಂದಿನ ಸಂಹಿತೆಯ 35ನೇ ಅಧ್ಯಾಯದಲ್ಲಿ ಪಿತೃಮೇಧ ವಿಧಿಯ ವರ್ಣನೆ ಬಂದಿದೆ. ಪಿತೃಮೇಧದ ಆಚರಣೆಯಿಂದ ಪಿತೃಲೋಕವು ಲಭಿಸುತ್ತದೆ, ಆದರೆ ಶಿವಮೇಧದಿಂದ ಶಿವ ಸಾಯುಜ್ಯವು ಪ್ರಾಪ್ತವಾಗುತ್ತದೆ.
| ಮುಕುಟಾಗಮ (ಚರ್ಯಾಪಾದ)1. 10 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.