

ಜಿಹ್ವಾಚಾಪಲ್ಯಸಂಯುಕ್ತಃ ಶೈವಸಂಸ್ಕಾರವರ್ಜಿತಃ | ಶೈವನಿರ್ವಲ್ಯಭೋಜೀ ಚೇದ್ ರೌರವಂ ನರಕಂ ವ್ರಜೇತ್ ||
ಶೈವ ಸಂಸ್ಕಾರಗಳನ್ನು ಬಿಟ್ಟು ಅನಾಚಾರಿಯಾದ ವ್ಯಕ್ತಿಯು ಕೇವಲ ನಾಲಿಗೆಯ ಚಪಲಕ್ಕಾಗಿ ಶಿವನಿಗೆ ಅರ್ಪಿಸಿದ ಪವಿತ್ರವಾದ ನೈವೇದ್ಯವನ್ನು ಅಪವಿತ್ರ ಭಾವದಿಂದ ಸ್ವೀಕರಿಸಿದ್ದೇ ಆದರೆ ಅವನು ರೌರವ ನರಕಕ್ಕೆ ಹೋಗುತ್ತಾನೆ. ಪ್ರಸಾದವು ಪರಮ ಪವಿತ್ರವಾದುದು, ಅದನ್ನು ಪವಿತ್ರ ಭಾವದಿಂದಲೇ ಸ್ವೀಕರಿಸಬೇಕು. ಇದಷ್ಟೇ ಅಲ್ಲದೆ ಯದ್ಭಾವಂ ತದ್ಭವತಿ ಎಂಬ ಉಕ್ತಿಯಂತೆ ಧಾರ್ವಿುಕವಾಗಿ ಪವಿತ್ರವಾದ ಯಾವುದೇ ಸಂಗತಿಯನ್ನು ಪವಿತ್ರ ಭಾವದಿಂದ ಉಪಯೋಗಿಸಿದಾಗ ಮಾತ್ರ ಅದರಿಂದ ಉತ್ತಮವಾದ ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಒಂದು ವೇಳೆ ಅಪವಿತ್ರ ಭಾವದಿಂದಾಗಲಿ ದುರಾಚಾರ ಮಾರ್ಗದಿಂದಾಗಲಿ ಅಥವಾ ದುರಹಂಕಾರದಿಂದಾಗಲಿ ಅದರ ಪಾವಿತ್ರ್ಯವನ್ನು ಕಡೆಗಣಿಸಿ ಅವಹೇಳನ ಮಾಡಿದರೆ, ಅನಗತ್ಯವಾಗಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
| ಮುಕುಟಾಗಮ (5. 19)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.