

ಬೆಂಗಳೂರು: ಕಾವೇರಿ ನೀರು ಬಿಡುವ ವಿಚಾರದಲ್ಲಿ ವೀರಪ್ಪ ಮೊಯಿಲಿ ಸಲಹೆ ತಗೊಳ್ಳಿ. ರಾಜ್ಯದ ಜನರನ್ನು ಉದ್ಧಾರ ಮಾಡಿ, ನಿಮ್ಮನ್ನು ಉದ್ಧಾರ ಮಾಡ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ನನಗೆ 15 ದಿನದ ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾಗಿದೆ. ನಾನು ಸರ್ವಪಕ್ಷ ನಾಯಕರ ಸಭೆಯಲ್ಲಿ ಭಾಗಿಯಾಗುತ್ತಿಲ್ಲ ಎಂದರು.
ಮಣ್ಣಿನ ಮಕ್ಕಳಿಂದಲೇ ಕಾವೇರಿ ನೀರಿನ ಕೊರತೆ ಆಗಿದ್ದು ಎಂದು ಮೊಯಿಲಿ ಹೇಳಿದ್ದನ್ನು ನೋಡಿದ್ದೇನೆ.
ಯಾವ ಮಹಾನುಭಾವನನ್ನು ಜನ ತಿರಸ್ಕಾರ ಮಾಡಿ ಮನೆಗೆ ಕಳುಹಿಸಿದಾಗ 2 ವರ್ಷ ಮುಖ್ಯಮಂತ್ರಿ ಆಗಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲಾಗದೆ ಪಶ್ಚಿಮ ಬಂಗಾಳದ ಕಂಪನಿಯಿಂದ ಸಾಲ ತಂದಿದ್ದನ್ನು ನೋಡಿದ್ದೇನೆ. ಅವನು ದೊಡ್ಡ ಕವಿ ಸರ್ವೋತ್ತಮ ಅಂತೆ. ಸರಸ್ವತಿ ಸನ್ಮಾನ್ ಪ್ರಶಸ್ತಿ ಬೇರೆ ಪಡೆದಿದ್ದಾರೆ.
ಮಂಗಳವಾರ ಏನೇನು ಹೇಳಿದ್ದಾರೆ, ಅದೆಲ್ಲ ನಾನೆ ಮಾಡಿದ್ದು ಎಂದಿದ್ದಾರೆ. ಕಾವೇರಿ ಟ್ರಿಬ್ಯುನಲ್ ರಚನೆ ಮಾಡಿರೋದ್ರಲ್ಲಿ ಈ ಮಹಾನುಭಾವನ ಕೊಡುಗೆ ಏನು? ಎಂದು ಪ್ರಶ್ನಿಸಿದರು.
14 ಟಿಎಂಸಿ ಹೆಚ್ಚು ನೀರು ಕೊಡೋದಕ್ಕೆ ಯಾರು ಕಾರಣ, ಇವರ ಹತ್ತಿರ ಮಣ್ಣಿನ ಮಕ್ಕಳು ಹೇಳಿಸಿಕೊಳ್ಳಬೇಕಾಗಿಲ್ಲ.
ಇವರು ಮಹಾನುಭಾವರು, ರಾಮಾಯಣ-ಮಹಾಭಾರತದ ತಜ್ಞರು. ರಾಜ್ಯ ಸರ್ಕಾರ ಇವರನ್ನು ಕೂರಿಸಿಕೊಂಡು ಸಲಹೆ ತಗೊಳ್ಳಿ ನಾವೆಲ್ಲ ಬೇಡ ನಿಮಗೆ ಬೇಡ ಎಂದು ಸರ್ಕಾರವನ್ನು ಕುಮಾರಸ್ವಾಮಿ ತರಾಟೆ ತೆಗೆದುಕೊಂಡಿದ್ದಾರೆ.