ಪುರಾಣ ಪ್ರವಚನದಿಂದ ನೆಮ್ಮದಿ ಪ್ರಾಪ್ತಿ; ಶರಣ ಗದಿಗೆಯ್ಯ ಸ್ವಾಮಿ

28-RNR-05
Published on

ರಾಣೆಬೆನ್ನೂರ: ಶಿವಶರಣರ ಜೀವನ ಚರಿತ್ರೆ ಕೇಳುವ ಮೂಲಕ ನೆಮ್ಮದಿಯ ಬದುಕಿಗೆ ಪುರಾಣ ಪ್ರವಚನಗಳು ಮಾರ್ಗವಾಗುತ್ತವೆ ಎಂದು ಶರಣ ಗದಿಗೆಯ್ಯಸ್ವಾಮಿ ಹಿರೇಮಠ ಹೇಳಿದರು.
ಇಲ್ಲಿಯ ಬೀರೇಶ್ವರ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಸಾಂಸ್ಕೃತಿಕ ಸೇವಾ ಸಮಿತಿ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಆಧುನಿಕತೆಯ ನೆಪದಲ್ಲಿ ನಮ್ಮ ಸಂಸ್ಕೃತಿ ಮರೆಯಬಾರದು. ದೇವರ ನಾಮಸ್ಮರಣೆ ಹಾಗೂ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಹಿರಿಯರು ರೂಢಿಸಿಕೊಂಡು ಬಂದಿರುವ ಇಂತಹ ಕಾರ್ಯಕ್ರಮಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಬಿ. ಮಾಸಣಗಿ, ಉಪಾಧ್ಯಕ್ಷ ಈರಣ್ಣ ಮಾಕನೂರ, ವರ್ತಕ ರಾಜಣ್ಣ ಮೋಟಗಿ, ಜಿ.ಜಿ. ಹೊಟ್ಟಿಗೌಡ್ರ, ಎನ್.ಜಿ. ಬದಾಮಿ, ಗುಡ್ಡಪ್ಪ ಹಿಂದಿನಮನಿ, ಮೌನೇಶ ತ್ರಾಸದ, ಎಚ್.ಎಸ್. ಮುದಿಗೌಡರ, ಎಚ್.ಎಂ. ನಂದಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net