

ಶಿವಮೊಗ್ಗ: ವೀರಭದ್ರೇಶ್ವರ ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಆತ ಇಡೀ ದೇಶದ ಶಕ್ತಿ ಎಂದು ಲೋಕಸಭಾ ಸದಸ್ಯ
ಬಿ.ವೈ.ರಾಘವೇಂದ್ರ ಬಣ್ಣಿಸಿದರು.
ನಗರದ ಚೌಕಿಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ
ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಅಂಗವಾಗಿ ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆಯಲ್ಲಿ ಮಾತನಾಡಿದ ಅವರು, ವೀರಭದ್ರ
ವೀರನೂ, ಭದ್ರನೂ ಆಗಿದ್ದಾನೆ. ದುಷ್ಟರ ಪಾಲಿಗೆ ಭದ್ರನಾಗಿದ್ದಾನೆ ಎಂದರು.
ವೀರಭದ್ರೇಶ್ವರ ಜಯಂತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವಂತಾಗಿದೆ. ವೀರಭದ್ರೇಶ್ವರ ಜಯಂತಿಯನ್ನೂ ಸರ್ಕಾರ
ಅಧಿಕೃತವಾಗಿ ಘೋಷಣೆ ಮಾಡಿದೆ. ಪತ್ರಿ ಮಂಗಳವಾರ ವೀರಶೈವ-ಲಿಂಗಾಯತರು ವೀರಭದ್ರನ ದಿನವನ್ನಾಗಿ ಆಚರಿಸುತ್ತಿದ್ದು
ವೀರಭದ್ರ ಒಂದು ಶಕ್ತಿಯಾಗಿದ್ದೇನೆ. ಅಂತಹ ವೀರಭದ್ರೇಶ್ವರ ಹೆಸರಲ್ಲಿ ಆಚರಿಸುತ್ತಿರುವ ಜಯಂತಿಯು ಜೀವನದಲ್ಲಿ ಬದಲಾವಣೆ
ತರುವ ದಿನವಾಗಬೇಕಿದೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮಾಜದ ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಹಾಕಿಕೊಡುವ
ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಕುವೆಂಪು ವಿವಿ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ, ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ,
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮಾತನಾಡಿದರು. ಶಿವಮೊಗ್ಗ ಔಷಧ
ನಿಮಂತ್ರಕ ವೀರೇಶ್‌ಬಾಬು ಉಪನ್ಯಾಸ ನೀಡಿದರು. ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾನಾಧೀಶ್ವರ ಡಾ. ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಹಾಸಂಸ್ಥಾನ ಮಳಲಿ ಮಠದ ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಎಂಎಲ್ಸಿ ಆಯನೂರು ಮಂಜುನಾಥ, ಮೇಯರ್ ಸುನೀತಾ ಅಣ್ಣಪ್ಪ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ
ನೂತನ ನಿರ್ದೇಶಕರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎನ್.ಜೆ.ರಾಜಶೇಖರ್, ಎಸ್.ಪಿ.ದಿನೇಶ್, ಅನಿತಾ ರವಿಶಂಕರ್, ಬಳ್ಳೇಕೆರೆ
ಸಂತೋಷ್, ಕಾರ್ಪೊರೇಟರ್‌ಗಳಾದ ಎಸ್.ಎನ್.ಚನ್ನಬಸಪ್ಪ, ಎಚ್.ಸಿ.ಯೋಗೇಶ್, ಈ.ವಿಶ್ವಾಸ್, ಸೂಡಾ ಅಧ್ಯಕ್ಷ
ಎನ್.ಜಿ.ನಾಗರಾಜ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್, ಡಿಎಚ್‌ಒ ಡಾ.
ರಾಜೇಶ್ ಸುರಗಿಹಳ್ಳಿ, ಶಿವಮೊಗ್ಗ ತ್ರಿನೇತ್ರ ಅಧ್ಯಕ್ಷ ಬಿ.ಕೆ.ಬೆನಕಪ್ಪ, ವೀರಶೈವ ಕಲ್ಯಾಣ ಮಂದಿರ ಸಮಿತಿ ಅಧ್ಯಕ್ಷ ಟಿ.ವಿ.ಈಶ್ವರಯ್ಯ,
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಈರೇಶ್‌ಗೌಡ, ವೀರಶೈವ ಸಮಾಜದ ಉಪಾಧ್ಯಕ್ಷ
ಕೆ.ಎಚ್.ಜ್ಞಾನೇಶ್ವರಪ್ಪ, ಬಿ.ಜಿ.ಧನರಾಜ್, ನವೀನ್ ವಾರದ್, ಎನ್.ಎಸ್.ಎಂ.ಗಂಗಾಧರ, ನಾಗರಾಣಿ ಉಪಸ್ಥಿತರಿದ್ದರು.