ವೀರಭದ್ರೇಶ್ವರ ಗುಗ್ಗಳ, ಬಸವೇಶ್ವರ ದೇವರ ತೇರು

srl virabadreswara
ಶಿರಾಳಕೊಪ್ಪ ಹೊರವಲಯದ ನೇರಲಗಿ ವೀರಭದ್ರೇಶ್ವರ ಶರಬಿ ಗುಗ್ಗಳದಲ್ಲಿ ವೀರಭದ್ರ ಕುಣಿತ.
Published on

ಶಿರಾಳಕೊಪ್ಪ: ನೇರಲಗಿ ವೀರಭದ್ರೇಶ್ವರ ಶರಬಿ ಗುಗ್ಗಳ ಹಾಗೂ ಬಸವೇಶ್ವರ ದೇವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಸೋಮವಾರ ನಸುಕಿನಲ್ಲಿ ಪಟ್ಟಣದ ಬಸವೇಶ್ವರ ದೇವಾಲಯದಿಂದ ಹೊರಟ ಶರಬಿ ಗುಗ್ಗಳ ಪ್ರಮುಖ ರಸ್ತೆಯಲ್ಲಿ ಸಾಗಿ ಹೊರವಲಯದ ನೇರಲಗಿ ವೀರಭದ್ರೇಶ್ವರನ ಸನ್ನಿಧಿಗೆ ಆಗಮಿಸಿತು. ನೇರಲಗಿ ಮತ್ತು ಬೆಲವಂತನಕೊಪ್ಪ ಗ್ರಾಮದಲ್ಲಿ ಇನ್ನೊಂದು ಗುಗ್ಗಳದ ತಂಡ ಆಗಮಿಸಿದ ನಂತರ ವಾಡಿಕೆಯಂತೆ ಶರಬಿ ಗುಗ್ಗಳಗಳು ಆಗಮಿಸಿದ ನಂತರ ಮೊದಲೇ ಸಿದ್ಧವಾಗಿದ್ದ ಬಸವೇಶ್ವರ ರಥೋತ್ಸವ ಭಕ್ತರ ಜಯಘೋಷದೊಂದಿಗೆ ನಡೆಯಿತು. ಶಿರಾಳಕೊಪ್ಪ ಭಾಗದ ಕೊನೆಯ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಕೆಳದಿ ಅರಸರ ಕಾಲದಲ್ಲಿ ಪ್ರತಿಷ್ಠಾಪನೆ ಗೊಂಡಿರುವ ವೀರಭದ್ರ ದೇವರ ಶರಬಿ ಗುಗ್ಗಳ ಹಾಗೂ ರಥೋತ್ಸವದಲ್ಲಿ ಎಲ್ಲ ವಗರ್ದ ಜನರು ಭಾಗವಹಿಸುವುದು ಇಲ್ಲಿಯ ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net