ವಿವಿಧ ಧಾಮಿರ್ಕ ಕಾರ್ಯಕ್ರಮ ಅ. 29ರಿಂದ

je721538035802367-abc
Published on

ಹಾವೇರಿ: ನಗರದ ಶ್ರೀ ವೀರಭದ್ರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಅ. 29ರಿಂದ ನ. 2ರವರೆಗೆ ವಿವಿಧ ಧಾಮಿರ್ಕ ಕಾರ್ಯಕ್ರಮ ನಡೆಯಲಿವೆ.

ಅ. 29ರಂದು ಬೆಳಗ್ಗೆ 9.30ರಿಂದ 10.30ರ ವರೆಗೆ ಶ್ರೀ ವೀರಭದ್ರ ದೇವರಿಗೆ ಕಂಕಣಧಾರಣ ನಡೆಯಲಿದೆ. ಅ. 30ರಂದು ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ ಶ್ರೀ ವೀರಭದ್ರ ದೇವರ ಹೂವಿನ ತೇರು ಹೊರಡಲಿದೆ. ಅ. 31ರಂದು ಬೆಳಗ್ಗೆ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಿಂದ ಗುಗ್ಗಳ ಹೊರಟು, ಶ್ರೀ ವೀರಭದ್ರೇಶ್ವರ ದೇವಸ್ಥಾನ ತಲುಪಲಿದೆ. ಬಳಿಕ ಅಗ್ನಿ ಕುಂಡ ಹಾಯುವುದು. ಸಂಜೆ 6ಕ್ಕೆ ಶ್ರೀ ವೀರಭದ್ರ ದೇವರ ಅಲಂಕರಿಸಿದ ರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ದೇವಸ್ಥಾನದಿಂದ ಹೊರಡಲಿದೆ ಎಂದು ದೇವಸ್ಥಾನ ಟ್ರಸ್ಟ್​ ಕಮಿಟಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net