2025 ಕ್ಕಿಂತ 2026 ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂದ 'ವೈದಿಕ ಜ್ಯೋತಿಷ್ಯ' | Vedic astrology

Disaster
Published on

Vedic astrology; 2025 ರಲ್ಲಿ ಒಂದರ ನಂತರ ಒಂದರಂತೆ ವಿಮಾನ ಅವಘಡ, ಪ್ರವಾಹ, ದಾಳಿ ಸೇರಿದಂತೆ ಅನೇಕ ಘಟನೆಗಳು ನಡೆದಿವೆ. ಅದು ಹಲವರ ಮೇಲೆ ಪ್ರಭಾವವನ್ನೂ ಬೀರಿದೆ. ಇದರ ಜೊತೆಗೆ 2026 ರಲ್ಲಿ ಗ್ರಹಗಳ ಸ್ಥಾನವು ಅನೇಕ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎನ್ನಲಾಗಿದೆ. ಇದು ದೇಶ ಮತ್ತು ಪ್ರಪಂಚ ಸೇರಿದಂತೆ ಆರ್ಥಿಕತೆ, ಭಾರತೀಯ ರಾಜಕೀಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

2026 ರಲ್ಲಿ ಬರಗಾಲದ ಜೊತೆಗೆ ಬೆಳೆ ನಾಶವೂ ಆಗಲಿದೆಯಂತೆ. ಭಾರತೀಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಮತ್ತು ಭಯೋತ್ಪಾದಕ ಚಟುವಟಿಕೆಗಳು ಸಹ ಹೆಚ್ಚಾಗಬಹುದು. ಒಟ್ಟಾರೆಯಾಗಿ ಸಾರ್ವಜನಿಕ ಜೀವನವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು, ನೀವು ಕೆಲ ವಿಷಯಗಳಲ್ಲಿ ಜಾಗರೂಕರಾಗಿರಬೇಕು ಎಂದು ಹೇಳಲಾಗಿದೆ.

2026 ರಲ್ಲಿ ಯಾವುದೇ ಘಟನೆಗಳು ಸಂಭವಿಸಲಿ, ಅವು ತುಂಬಾ ಭಯಾನಕವಾಗಿರುತ್ತವೆ ಎಂದು ವೈದಿಕ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಪ್ರಕೃತಿ ತನ್ನ ರುದ್ರ ರೂಪವನ್ನು ತೋರಿಸುತ್ತದೆ ಮತ್ತು ಅಪಾರ ಜೀವ ಹಾಗೂ ಆಸ್ತಿ ನಷ್ಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಹು ಮತ್ತು ಕೇತು

2026 ರಲ್ಲಿ ರಾಹು ಮತ್ತು ಕೇತುಗಳು ಸಂಚರಿಸಲಿದ್ದಾರೆ. ಸದ್ಯ ಈಗ ರಾಹು ಕುಂಭ ರಾಶಿಯಲ್ಲಿ ಮತ್ತು ಕೇತು ಸಿಂಹ ರಾಶಿಯಲ್ಲಿದ್ದಾರೆ. ಆದರೆ 2026 ರಲ್ಲಿ ರಾಹು ಕುಂಭ ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸುತ್ತಾನೆ ಮತ್ತು ಕೇತು ಸಿಂಹ ರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಜೊತೆಗೆ ಗ್ರಹಗಳ ಅಧಿಪತಿಯಾದ ಮಂಗಳನ ನಡವಳಿಕೆಯಲ್ಲಿ ವಿಶೇಷ ಬದಲಾವಣೆಯಾಗುತ್ತದೆ.

ಶನಿ ಮತ್ತು ಸೂರ್ಯರ ಸಂಯೋಗ

2026 ರಲ್ಲಿ ಶನಿ ಮತ್ತು ಸೂರ್ಯರ ಸಂಯೋಗ ಆಗಲಿದೆ. ಜೊತೆಗೆ, ಗುರುವಿನ ರಾಶಿಚಕ್ರ ಚಿಹ್ನೆ ಮೀನದಲ್ಲಿ ಎರಡು ಶತ್ರು ಗ್ರಹಗಳ ಮಹಾ ಸಂಯೋಗ ಇರುತ್ತದೆ. ಬಳಿಕ ಶನಿಯೊಂದಿಗೆ ಮಂಗಳ, ರಾಹು ಮತ್ತು ಕೇತುವಿನ ಅಶುಭ ಸಂಯೋಗ ಇರುತ್ತದೆ. ಹೀಗಾಗಿ ಅನೇಕ ದೇಶಗಳಲ್ಲಿ ರಾಜತಾಂತ್ರಿಕ ಒತ್ತಡ ಕ್ರಮೇಣ ಹೆಚ್ಚಾಗಲಿದೆ. ಅನೇಕ ಸ್ಥಳಗಳಲ್ಲಿ ಹಿಂಸಾಚಾರ ಹೆಚ್ಚಾಗಲಿದೆಯಂತೆ.

ಗುರು ಸಮಸ್ಯೆ

ವೈದಿಕ ಜ್ಯೋತಿಷ್ಯದ ಪ್ರಕಾರ 2026 ರಲ್ಲಿ ಗುರುವು ಬುಧನ ಮನೆ ಮಿಥುನದಲ್ಲಿ ಜೂನ್ 2 ರವರೆಗೆ ಇರುತ್ತಾನೆ. ನಂತರ ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಕರ್ಕಾಟಕದಲ್ಲಿ ಇರುತ್ತಾನೆ. ಹೀಗಾಗಿ ವಾತಾವರಣದಲ್ಲಿ ವಿಶೇಷ ಬದಲಾವಣೆಗಳು ಕಂಡುಬರುತ್ತವೆ. ಪರಿಣಾಮವಾಗಿ ಪ್ರವಾಹ, ಬಿರುಗಾಳಿಗಳು, ಚಂಡಮಾರುತಗಳು ಸೇರಿದಂತೆ ವಿವಿಧ ನೈಸರ್ಗಿಕ ವಿಕೋಪಗಳನ್ನು ಸಂಭವಿಸಬಹುದು ಎನ್ನಲಾಗಿದೆ.

ಶತ್ರುಗಳ ನಾಶ

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಭಾರತದ ಶಕ್ತಿ ಹಲವು ಪಟ್ಟು ಹೆಚ್ಚಾಗಲಿದ್ದು ಆ ಶಕ್ತಿಯು ಶತ್ರುಗಳನ್ನು ನಾಶ ಮಾಡಲಿದೆ. ಆದರೆ ಕಾಲಕಾಲಕ್ಕೆ ಯುದ್ಧದ ಸಂಭವಿಸಬಹುದಂತೆ. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿ, ನೈಸರ್ಗಿಕ ವಿಕೋಪಗಳು ಸಹ ಸಂಭವಿಸಲಿವೆಯಂತೆ. ಹಾಗಾಗಿ ಮುಂದಿನ ವರ್ಷ ಜುಲೈ ನಿಂದ ಆಗಸ್ಟ್ ವರೆಗಿನ ಸಮಯವು ತುಂಬಾ ಅಪಾಯಕಾರಿ ಎನ್ನಲಾಗಿದೆ. ಆ ಸಮಯದಲ್ಲಿ ಗುರು, ಚಂದ್ರ ಮತ್ತು ಸೂರ್ಯ ಕರ್ಕಾಟಕ ರಾಶಿಯಲ್ಲಿ ಒಂದೇ ಸಮಯದಲ್ಲಿ ಇರುತ್ತಾರೆ. ಇದರಿಂದಾಗಿ ವಿನಾಶ ಸಂಭವಿಸಬಹುದಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net