ನಾಯಕಿ ಪ್ರಧಾನ ಥ್ರಿಲ್ಲರ್‌ ಶೈಲಿಯ ‘ಫಿಯರ್‌’ ಚಿತ್ರದಲ್ಲಿ ವೇದಿಕಾ

vedika
Published on

ಹೈದರಾಬಾದ್​: ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಹಲವು ಭಾಷೆಗಳ ಸಿನಿಮಾಗಳಲ್ಲಿ ಬಿಜಿಯಾಗಿರುವ ಬಹುಭಾಷಾ ನಟಿ ವೇದಿಕಾ, ಇದೆಲ್ಲದರ ನಡುವೆಯೇ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ 'ಫಿಯರ್‌' ಎಂದು ಹೆಸರಿಡಲಾಗಿದೆ.

ವೇದಿಕಾ ನಾಯಕಿಯಾಗಿ ನಟಿಸುತ್ತಿರುವ ತೆಲುಗಿನ ಫಿಯರ್‌ ಸಿನಿಮಾಗೆ ಬುಧವಾರ ಮುಹೂರ್ತ ನೆರವೇರಿತು. ನಾಯಕಿ ಪ್ರಧಾನ ಈ ಸಿನಿಮಾಕ್ಕೆ ಹರಿತಾ ಗೋಗಿನೇನಿ ನಿರ್ದೇಶಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

ಫಿಯರ್ ಮೂವಿ ಸೀಟ್ ಎಡ್ಜ್‌ ಥ್ರಿಲ್ಲರ್‌ ಎಂದು ಸ್ವತಃ ವೇದಿಕಾ ಹೇಳಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ನನ್ನ ಮೊದಲ ಸಿನಿಮಾ ಇದು ಎಂದೂ ವೇದಿಕಾ ಹೇಳಿದ್ದಾರೆ.

ತೆಲುಗು ಬಿಗ್ ಬಾಸ್‌ನ ಸೊಹೈಲ್ ಮತ್ತು ಹಿರಿಯ ನಟ ಮುರಳಿ ಮೋಹನ್ ಫಿಯರ್ ಸಿನಿಮಾದಲ್ಲಿ ಮುಹೂರ್ತದಲ್ಲಿ ಭಾಗವಹಿಸಿದ್ದರು. ಈ ಚಿತ್ರಕ್ಕೆ ಅನುರ್ ರೂಬೆನ್ಸ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅರವಿಂದ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಾಗಾರ್ಜುನ, ನಾಗ ಚೈತನ್ಯ ನಟನೆಯ ಬಂಗಾರ್ರಾಜು ಸಿನಿಮಾದಲ್ಲಿ ವೇದಿಕಾ ಕಾಣಿಸಿಕೊಂಡಿದ್ದರು. ಅದೇ ರೀತಿ ವೇದಿಕಾ ನಟನೆಯ ತೆಲುಗಿನ ರಜಾಕರ್ ಮತ್ತು ಜಂಗಲ್ ಸಿನಿಮಾಗಳೂ ಬಿಡುಗಡೆಗೆ ಸಿದ್ಧವಾಗಿವೆ. ಈ ವರ್ಷ ಅವರ ಒಟ್ಟು ಏಳು ಸಿನಿಮಾಗಳು ಬಿಡುಗಡೆ ಆಗಲಿವೆ. ಕನ್ನಡದಲ್ಲಿ ಪ್ರಜ್ವಲ್‌ ದೇವರಾಜ್‌ ಜತೆಗೆ ಗಣ ಸಿನಿಮಾದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net