ಈ ದಿನದಂದು ರಿಲೀಸ್​ ಆಗಲಿದೆ 'ವಿಡಿ 13' ಚಿತ್ರದ ಹೊಸ ಟೈಟಲ್ ಮತ್ತು ಟೀಸರ್​!

Untitled design - 2023-10-15T132322.464
Published on

ಆಂಧ್ರಪ್ರದೇಶ: ಟಾಲಿವುಡ್​ ಅಂಗಳದಲ್ಲಿ ಬ್ಲಾಕ್​ಬಸ್ಟರ್ ಹಿಟ್​ ​ಚಿತ್ರವಾಗಿ ಹೊರಹೊಮ್ಮಿದ 'ಗೀತ ಗೋವಿಂದಂ' ಚಿತ್ರದ ಯಶಸ್ವಿ ಕಾಂಬಿನೇಷನ್​ ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಪೆಟ್ಲ ಇದೀಗ ಮತ್ತೊಮ್ಮೆ ಸಿನಿಪ್ರೇಕ್ಷಕರನ್ನು ಮನರಂಜಿಸಲು ಭರ್ಜರಿ ತಯಾರಿ ನಡೆಸಿದ್ದು, 'ವಿಡಿ 13' ಎಂಬ ತಾತ್ಕಾಲಿಕ ಟೈಟಲ್​ನಡಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಬಗ್ಗೆ ಇದ್ದ ಗೊಂದಲಕ್ಕೆ ಇಂದು ಚಿತ್ರತಂಡ ಅಧಿಕೃತ ಮಾಹಿತಿಯೊಂದಿಗೆ ತೆರೆ ಎಳೆದಿದೆ.

'VD 13' ಚಿತ್ರದ ಮುಖೇನ ಮತ್ತೊಮ್ಮೆ ತೆರೆ ಮೇಲೆ ಕಮಾಲ್​ ಮಾಡಲು ಸಜ್ಜಾದ ವಿಜಯ್​ ಮತ್ತು ಪರಶುರಾಮ್​, 'ಗೀತಾ ಗೋವಿಂದಂ' ಚಿತ್ರವನ್ನು ಮೆಗಾ ಹಿಟ್​ ಮಾಡಿದಂತೆಯೇ ಈ ಚಿತ್ರವನ್ನು ರೂಪಿಸಲು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿಜಯ್​ಗೆ ನಾಯಕಿಯಾಗಿ 'ಸೀತಾ ರಾಮಂ' ಖ್ಯಾತಿಯ ಮೃಣಾಲ್ ಠಾಕೂರ್​ ಕಾಣಿಸಿಕೊಂಡಿದ್ದಾರೆ.

ಈ ಹಿಂದೆಯೇ ಚಿತ್ರತಂಡ ಘೋಷಿಸಿದಂತೆ ಚಿತ್ರವು 2024ರ ಸಂಕ್ರಾಂತಿಯ ಸಮಯಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುವುದು ಖಚಿತ ಎಂದು ಹೇಳಲಾಗಿದೆ. ಇದೀಗ 'ವಿಡಿ 13' ತಾತ್ಕಾಲಿಕ ಟೈಟಲ್​ ಬದಲಿಗೆ ಹೊಸ ಟೈಟಲ್​ ಮತ್ತು ಟೀಸರ್ ಅನ್ನು ಅಕ್ಟೋಬರ್ 18, 2023 ರಂದು ಸಂಜೆ 06:30ಕ್ಕೆ ಅಧಿಕೃತವಾಗಿ ಅನಾವರಣಗೊಳಿಸಲಾಗುವುದು ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.

ಚಿತ್ರವು ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಅವರು ನಿರ್ಮಾಣ ಮಾಡಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net