

ಬಿಗ್‌ಬಾಸ್ ಮಾಜಿ ಸ್ಪರ್ಧಿ ಮತ್ತು ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಮ್ಮ ಬಹುಕಾಲದ ಗೆಳತಿಯ ಜತೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ.
ತಮ್ಮ ಬಹುಕಾಲದ ಗೆಳತಿ ಜೊತೆಗೆ ಸಪ್ತಪದಿ ತುಳಿಯುತ್ತಿದ್ದಾರೆ. ಇಂದು (ನವೆಂಬರ್ 16) ಮದುವೆ ನೆರವೇರುತ್ತಿದ್ದು, ತುಂಬ ಖಾಸಗಿಯಾಗಿ ಈ ವಿವಾಹವು ನಡೆಯುತ್ತಿದೆ. ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಮದುವೆಗೆ ಸಾಕ್ಷಿ ಆಗಲಿದ್ದು, ಕಳೆದ ಎರಡ್ಮೂರು ದಿನಗಳಿಂದಲೇ ಮದುವೆ ಶಾಸ್ತ್ರಗಳು ಆರಂಭವಾಗಿದ್ದವು.
ಮದುವೆಯ ವಿವರಗಳನ್ನು ನಾವು ಗೌಪ್ಯವಾಗಿಡಲು ಬಯಸಿದ್ದೇವೆ" ಎಂದು ವಾಸುಕಿ ಹೇಳಿದ್ದು, "ನಾನು ನನ್ನ ಜೀವನದ ಪ್ರೀತಿಯನ್ನು ಮದುವೆಯಾಗುತ್ತಿದ್ದೇನೆ. ರಂಗಭೂಮಿ ಹಿನ್ನೆಲೆಯ ಬೃಂದಾ ವಿಕ್ರಮ್, ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಖಾಸಗಿಯಾಗಿ ಮದುವೆ ಆಗಬೇಕು ಎಂದಿದ್ದೇವೆ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿಯೂ ಹೇಳಿದ್ದರು.
ಸದ್ಯ ಮದುವೆಗಾಗಿ ಕೆಲ ಸಮಯ ಸಿನಿಮಾ ಕೆಲಸಗಳಿಂದ ವಾಸುಕಿ ಬ್ರೇಕ್ ತೆಗೆದುಕೊಂಡಿದ್ದಾರಂತೆ.
ವಾಸುಕಿ ವೈಭವ್ ಸದ್ಯ ಕನ್ನಡ ಚಿತ್ರರಂಗದ ಬೇಡಿಕೆಯ ಸಂಗೀತ ನಿರ್ದೇಶಕರಲ್ಲೊಬ್ಬರಾಗಿದ್ದು, 2016ರಲ್ಲಿ ತೆರೆಕಂಡ 'ರಾಮಾ ರಾಮಾ ರೇ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಿತಗೊಂಡರು ವಾಸುಕಿ.
ಮದುವೆಯ ನಂತರ ನಮಗೆ ಸಾಮಾನ್ಯ ಆರತಕ್ಷತೆ ಅಥವಾ ಅಂತಹ ಯಾವುದೇ ದೊಡ್ಡ ಕಾರ್ಯಕ್ರಮ ಇರುವುದಿಲ್ಲ. ಆದರೆ ಈ ನಮ್ಮ ಬಹುಮುಖ್ಯವಾದ ದಿನದಂದು ನಮ್ಮ ಹತ್ತಿರದವರು ಮತ್ತು ಆತ್ಮೀಯರು ನಮ್ಮನ್ನು ಸುತ್ತ ಇರುವುದು ನಮಗೆ ಸಂತೋಷವಾಗಿದೆ. ನಮ್ಮಿಬ್ಬರ ಇಷ್ಟದಂತೆ ನಮ್ಮ ಮದುವೆಯು ಸಾಂಪ್ರದಾಯಿಕವಾಗಿರುತ್ತದೆ" ಎಂದು ತಿಳಿಸಿದ್ದಾರೆ.