ಏರ್​ಪೋರ್ಟ್​ನಲ್ಲಿ ವರುಣ್​ ಧವನ್​​ ಕುರಿತ ಸೀಕ್ರೆಟ್​ ರಿವೀಲ್​ ಮಾಡಿದ ಮಹಿಳೆ; ವಿಡಿಯೋ ನೋಡಿ ಫ್ಯಾನ್ಸ್​​​ ಹೇಳಿದ್ದೀಗೆ.. | Varun Dhawan

Untitled design - 2024-10-28T144131.971
Published on

ಮುಂಬೈ: ಬಾಲಿವುಡ್ ನಟ ವರುಣ್ ಧವನ್(Varun Dhawan) ಉತ್ತಮ ನಟರಲ್ಲದೆ ಸಹೃದಯ ವ್ಯಕ್ತಿ. ಸಹನಟರಿಂದ ಸಂಭಾವಿತ ವ್ಯಕ್ತಿ ಎಂದು ಪ್ರಶಂಸಿಸಲ್ಪಡುವ ವರುಣ್​ ಅಭಿಮಾನಿಗಳ ನೆಚ್ಚಿನ ನಟ. ಅವರು ಆಗಾಗ್ಗೆ ಜನರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಹೇಗೆ ಎಂಬುದನ್ನು ಇತ್ತೀಚಿನ ವಿಡಿಯೋವೊಂದು ಸಾಬೀತುಪಡಿಸಿದೆ.

ಕಾರ್ಯಕ್ರಮವೊಂದರ ನಿಮಿತ್ತ ಇತ್ತೀಚೆಗಷ್ಟೆ ಯುಎಇಗೆ ತೆರಳಿದ್ದ ನಟ ವರುಣ್ ಧವನ್ ಅವರು ಭಾರತಕ್ಕೆ ವಾಪಸ್ಸಾಗಿದ್ದರು. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಯೊಬ್ಬರು ವರುಣ್​ ಅವರ ಬಳಿಗೆ ಓಡಿಬಂದು ಹಾಯ್​ ವರುಣ್​ ಎಂದು ಮಾತನಾಡಲು ಆರಂಭಿಸಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ನಾನು ಈ ವಿಷಯವನ್ನು ಕ್ಯಾಮೆರಾದಲ್ಲಿ ಹೇಳಲೆಬೇಕು ಎಂದು ಹೇಳುತ್ತಾ, ನನ್ನ ಮಗಳು ಅಸ್ವಸ್ಥಳಾಗಿದ್ದಳು. ವರುಣ್ ಧವನ್ ಅವರ ತಂದೆ ಅಲ್ಲಿದ್ದರು ಅದರ ಜತೆಗೆ ಅವರು ನನ್ನ ಮಗಳನ್ನು ನೋಡಲು ಬಂದರು. ಅವರಿಗೆ ನನ್ನ ಪರಿಚಯವಿಲ್ಲ ಆದರೂ ಅಸ್ವಸ್ಥಳಾಗಿದ್ದ ನನ್ನ ಮಗಳನ್ನು ನೋಡಲು ಬಂದಿದ್ದರು ಎಂದು ಹೇಳಿದರು. ವರುಣ್​​ ಒಳ್ಳೆಯ ಮತ್ತು ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ.

ಆ ಮಹಿಳೆಯ ಮಾತಿನ ನಂತರ ವರುಣ್​​ ನನಗೆ ಗೊತ್ತು , ಈಗ ಅವರು ಹೇಗಿದ್ದಾರೆ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಮಹಿಳೆ ಅವಳು ಚೆನ್ನಾಗಿದ್ದಾಳೆ ಎಂದರು. ನಂತರ ನಟ ಆಕೆಯ ನಾಯಿಯನ್ನು ನೋಡಿ ಅದನ್ನು ಮುದ್ದಿಸಿ ಕಾರಿನ ಕಡೆಗೆ ನಡೆಯುವ ಮೊದಲು ಶೇಕ್​ಹ್ಯಾಂಡ್​ ನೀಡಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸರ್ಬಾನಿ ಸೇನ್‌ಗುಪ್ತಾ ಎಂಬ ಮಹಿಳೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗಳ ಆರೋಗ್ಯವು ಹದಗೆಟ್ಟಾಗ ಅವರನ್ನು ಹುರಿದುಂಬಿಸಿದ್ದಕ್ಕಾಗಿ ಧನ್ಯವಾದಗಳು! ಕಲೆಯ ಗುರಿ ಆತ್ಮವನ್ನು ಸ್ಪರ್ಶಿಸುವುದು. ಮತ್ತು ಕೆಲವೊಮ್ಮೆ ಕಲಾವಿದರು ನನ್ನಂತಹ ಸಾಮಾನ್ಯ ಜನರ ಹೃದಯವನ್ನು ಮುಟ್ಟುತ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಅಭಿಮಾನಿಗಳ ಕಾಳಜಿ ವಹಿಸುವ ಅವರು ಅತ್ಯುತ್ತಮರು ಎಂದು ನಾನು ಭಾವಿಸುತ್ತೇನೆ, ವರುಣ್​​​ ಧವನ್​​ ಮ್ಯಾನ್ ವಿತ್ ಎ ಗೋಲ್ಡನ್ ಹಾರ್ಟ್!, ವರುಣ್ ಭಾಯ್ ನಿಮ್ಮ ಮೇಲಿನ ಗೌರವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೊಗಳಿದ್ದಾರೆ.

ವರುಣ್​ ಧವನ್​ ಪ್ರಸ್ತುತ ತಮ್ಮ ಮುಂಬರುವ ಸಿರೀಸ್​​​ ಸಿಟಾಡೆಲ್​ ಹನಿ ಬನ್ನಿ ಪ್ರಚಾರದಲ್ಲಿ ಬಿಜಿ ಇದ್ದಾರೆ. ಈ ಸರಣಿ ನವೆಂಬರ್ 7ರಂದು ಒಟಿಟಿ ಪ್ಲಾಟ್​ಫಾರ್ಮ್​​​ನಲ್ಲಿ ಪ್ರೀಮಿಯರ್ ಆಗಲಿದೆ. ಅಲ್ಲದೆ ಬೇಬಿ ಜಾನ್‌ ಸಿನಿಮಾದಲ್ಲಿ ವರುಣ್​​ ಅವರು ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರದಲ್ಲಿ ಕೀರ್ತಿ ಸುರೇಶ್, ವಾಮಿಕಾ ಗಬ್ಬಿ, ಜಾಕಿ ಶ್ರಾಫ್ ಮತ್ತು ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಚಿತ್ರ ಕ್ರಿಸ್​ಮಸ್​​ ದಿನ ಡಿಸೆಂಬರ್​​ 25ರಂದು ಥಿಯೇಟರ್​​ಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net