

ಮುಂಬೈ: ಬಾಲಿವುಡ್ನ ಸೆಲೆಬ್ರಿಟಿ ಜೋಡಿ ವರುಣ್ ಧವನ್ ಹಾಗೂ ನತಾಶಾ ದಲಾಲ್ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಈ ವಿಚಾರವನ್ನು ವರುಣ್ ತಂದೆ ಡೇವಿಡ್ ಧವನ್ ಅವರು ಖಚಿತಪಡಿಸಿದ್ದಾರೆ. ಸದ್ಯ ವರುಣ್ ಹಾಗೂ ಪತ್ನಿ ನತಾಶಾಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಈ ದಂಪತಿ ಮಗುವಿನ ಮುಖ ರಿವೀಲ್ ಮಾಡಲಿ ಎಂದು ಬಯಸುತ್ತಿದ್ದಾರೆ.
ವರುಣ್ ಧವನ್ ಹಾಗೂ ಡೇವಿಡ್ ಮುಂಬೈನ ಖಾಸಗಿ ಆಸ್ಪತ್ರೆಗೆ ನಡೆದು ಹೊರಟಿದ್ದರು. ಈ ವೇಳೆ ಅಲ್ಲಿದ್ದ ಪಾಪರಾಜಿಗಳು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ವರುಣ್ಗೆ ಹೆಣ್ಣು ಮಗು ಜನಿಸಿದ್ದು ನಿಜವೇ’ ಎಂದು ಕೇಳಲಾಗಿದೆ. ಇದಕ್ಕೆ ಡೇವಿಡ್ ಅವರು ಹೌದು ಎಂದಿದ್ದಾರೆ. ಇದರ ಜೊತೆಗೆ ವಿಶ್ ಮಾಡಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ.
ವರುಣ್ ಧವನ್ ಅವರು ಹೀರೋ ಆಗಿ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ನತಾಶಾ ದಲಾಲ್ ಅವರು ಫ್ಯಾಷನ್ ಡಿಸೈನರ್ ಆಗಿದ್ದಾರೆ.ವಿವಾಹ ಆಗಿದ್ದು 2021ರ ಜನವರಿ 24ರಂದು. ಅಲಿಭಾಗ್ನಲ್ಲಿ ಆಪ್ತರು ಹಾಗೂ ಕುಟುಂಬದವರ ಜೊತೆ ಮದುವೆ ಆಗಿದ್ದರು.