ವರ್ತೂರು ಪ್ರಕಾಶ್ ಅಪಹರಣದ ಕೇಸ್ ತನಿಖೆ ಎಲ್ಲಿವರೆಗೆ ಬಂತು?

vartur prakash
Published on

ಕೋಲಾರ : ಕೃತ್ಯ ನಡೆದು ವಾರದ ಬಳಿಕ ಬಹಿರಂಗಪಡಿಸಿದ ಮಾಜಿ ಶಾಸಕ ವರ್ತೂರು ಆರ್. ಪ್ರಕಾಶ್ ಮತ್ತು ಕಾರು ಚಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಕುತೂಹಲ ಕೆರಳಿಸಿದೆ. ವಿಶೇಷ ಅಂದರೆ ಇದುವರೆಗೂ ಆರೋಪಿಗಳು ಯಾರೆಂಬುದನ್ನು ಗುರುತಿಸುವುದಕ್ಕಾಗಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ವರ್ತೂರು ಪ್ರಕಾಶ್ ಮತ್ತು ಚಾಲಕನ ಅಪಹರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಪ್ರಕಾಶ್ ಮತ್ತು ಚಾಲಕ ಸುನೀಲ್ ನೀಡಿರುವ ದೂರು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಕೆಲವರ ವಿಚಾರಣೆ ನಡೆಸಲಾಗಿದೆಯೇ ಹೊರತು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಮೂಲದ ನಾಲ್ವರನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಅಪಹರಣಕ್ಕೆ ಪ್ರಚೋದನೆ ನೀಡಿದ ಪ್ರಮುಖ ಆರೋಪಿಗಳ ಪತ್ತೆಗೆ ತಮಿಳುನಾಡು ಸೇರಿ ಇನ್ನಿತರೆಡೆ ಶೋಧನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ತಮ್ಮನ್ನು ಹಸು, ಹಣ ಹಾಗೂ ಹೆಣ್ಣಿನ ವಿಚಾರವಾಗಿ ಯಾರೂ ಅಪಹರಿಸಿಲ್ಲ, ನನ್ನಲ್ಲಿ ಹಣ ಇದೆ ಎಂಬ ಕಾರಣಕ್ಕೆ ಅಪಹರಿಸಿದ್ದರು ಎಂದು ವರ್ತೂರು ತಿಳಿಸಿದ್ದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net