ರಸ್ತೆ ಅಭಿವೃದ್ಧಿಗೆ ವಿವಿಧ ಗ್ರಾಮಸ್ಥರ ಪಟ್ಟು

raitha sanga protest
ಕೋಲಾರ ತಾಲೂಕು ಬೆಗ್ಲಿ ಸಮೀಪ ಟೇಕಲ್​ ರಸ್ತೆಯನ್ನು ತಡೆದು ರೈತ ಸಂದ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಕೋಲಾರ: ಗ್ರಾಮೀಣ ಭಾಗದಲ್ಲಿ ಹಾನಿಯಾಗಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ, ವಿವಿಧ ಗ್ರಾಮಸ್ಥರು ರೈತ ಸಂ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಮಾಗೇರಿ, ಚೋಳಘಟ್ಟ, ಬೆಗ್ಲಿ ಬೇಣಜೇನಹಳ್ಳಿ ರಸ್ತೆಗಳು ಹದಗೆಟ್ಟಿದ್ದು, ವಾಹನಗಳು ಸಂಚಾರಕ್ಕೆ ಅನುಕೂಲವಾಗಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ತಾಲೂಕಿನ ಟೇಕಲ್​ ರಸ್ತೆ ತಡೆದರು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿ ರಸ್ತೆಗಳನ್ನು ಪರಿಸ್ಥಿತಿಯ ಬಗ್ಗೆ ಪ್ರದರ್ಶಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್​ ಮಾತನಾಡಿ, ಟೇಕಲ್​ ಮುಖ್ಯ ರಸ್ತೆಯಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ದಶಕಗಳು ಕಳೆದರೂ ಡಾಂಬರಿಕರಣ ಮಾಡಿಲ್ಲ. ಈ ಭಾಗದ ಜನ ಜನಪ್ರತಿನಿಧಿಗಳಿಗೆ ಏನು ದ್ರೋಹ ಮಾಡಿದ್ದಾರೆ ಎಂದು ಅಭಿವೃದ್ಧಿಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಕೋಲಾರ ನಗರಕ್ಕೆ ಕೂಗಳತೆಯಲ್ಲಿರುವ ಗ್ರಾಮಗಳ ರಸ್ತೆಗಳು ಹಾನಿಯಾಗಿ ಸುಮಾರು ವರ್ಷಗಳು ಕಳೆದಿವೆ. ಮಳೆ ಬಂದರೆ ರಸ್ತೆಗಳಲ್ಲಿನ ಗುಂಡಿ ಕಾಣುವುದಿಲ್ಲ. ವಾಹನ ಸವಾರರು ಜೀವನದ ಆಸೆ ಬಿಟ್ಟು ಸಂಚಾರ ಮಾಡಬೇಕಾಗಿದೆ. ದ್ವಿಚಕ್ರ ವಾಹನ ಸಾವರರು ಬಿದ್ದು ಕೈಕಾಲು ಕಳೆದುಕೊಂಡು ಅಂಗವಿಲಕರಾಗಿರುವ ನಿದರ್ಶನವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖಂಡ ಅಶೋಕ್​ ಮಾತನಾಡಿ, ಹಾನಿಯಾಗಿರುವ ರಸ್ತೆಯಲ್ಲಿ ವಿದ್ಯಾರ್ಥಿಗಳು ಯುವಕರ ರೈತರು ಕೂಲಿಕಾರ್ಮಿಕರು ಓಡಾಡುತ್ತಿದ್ದಾರೆ. ರಸ್ತೆಯಲ್ಲಿನ ಧೂಳಿನಿಂದ ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ವಾರದೊಳಗೆ ಹದಗೆಟ್ಟಿರುವ ಮಾಗೇರಿ, ಚೋಳಘಟ್ಟ ಹಾಗೂ ಬೆಗ್ಲಿ ಬೆಣಜೇನಹಳ್ಳಿ ರಸ್ತೆಗೆ ಮುಕ್ತಿ ಕಾಣಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಖಂಡರಾದ ರಾಮಚಂದ್ರ, ನಾಗೇಶ್​, ಶ್ರೀಕಾಂತ್​, ಜಗದೀಶ್​, ನವೀನ್​, ರಾಜು, ಕೇಶವ, ಮುನಿಶಾಮಿ, ವಸಂತ್​ ಕುಮಾರ್​, ರಾಮಣ್ಣ, ಸಿ.ಎಸ್​.ವೆಂಕಟೇಶ್​, ನಾರಾಯಣಸ್ವಾಮಿ, ಮಂಗಸಂದ್ರ ತಿಮ್ಮಣ್ಣ, ಗಿರೀಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net