

ಸೋಮವಾರಪೇಟೆ: ಗರ್ವಾಲೆ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಕ್ರೀಡಾ ಸಮಿತಿ ವತಿಯಿಂದ ಕೈಲ್ ಪೋಳ್ದ್ ಹಬ್ಬದ ಪ್ರಯುಕ್ತ ಗ್ರಾಮದ ಕೊತ್ತನಮೊಟ್ಟೆ ಆಟೋಟ ಮೈದಾನದಲ್ಲಿ ಗ್ರಾಮಸ್ಥರು ಹಾಗೂ ಸಮಾಜದ ಬಾಂಧವರಿಗೆ ಬುಧವಾರ ವಿವಿಧ ಕ್ರೀಡಾಸ್ಪರ್ಧೆ ನಡೆಯಿತು.
ಹಬ್ಬದ ವಿಶೇಷ ಹಂಬು ಹೊಡೆಯುವ ಕಾರ್ಯದಲ್ಲಿ ಪೊನ್ನಪ್ಪ, ಬೋಜಣ್ಣ ಪೂಜೆ ನೆರವೇರಿಸಿದರು. ಕ್ರೀಡಾ ಸ್ಪರ್ಧೆಯಲ್ಲಿ ಹಗ್ಗ ಜಗ್ಗಾಟ, ಗುಡ್ಡಗಾಡು ಓಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಮ್ಯಾರಥಾನ್, ಗೂಟಕ್ಕೆ ರಿಂಗ್ ಹಾಕುವುದು ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು.
ಹಗ್ಗ ಜಗ್ಗಾಟದಲ್ಲಿ ಗೀಜಿಗಂಡ ತಂಡ ಪ್ರಥಮ ಬಹುಮಾನ ಪಡೆಯಿತು. ಪೆಮ್ಮಯ್ಯ ತಂಡ ದ್ವಿತೀಯ ಸ್ಥಾನ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಸುರ ಮನು (ಪ್ರ), ಬಾಚಳ್ಳಿರ ಪೆಮ್ಮಯ್ಯ (ದ್ವಿ) ಬಹುಮಾನ, ಶಾಟ್‌ಪಟ್‌ನಲ್ಲಿ ಗೀಜಿಗಂಡ ಚೇತನ್(ಪ್ರ), ಗೀಜಿಗಂಡ ವನ(ದ್ವಿ) ಹಾಗೂ ಗೀಜಿಗಂಡ ಲೋಕೇಶ್(ತೃ) ಸ್ಥಾನ ಗಳಿಸಿದರು.
ಬಹುಮಾನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಕ್ರೀಡಾ ಸಮಿತಿಯ ಅಧ್ಯಕ್ಷ ಆರೂಡ ಅಪ್ಪಚ್ಚು ವಹಿಸಿದ್ದರು. ಉಪಾಧ್ಯಕ್ಷ ಪಾಸುರ ಮನು, ಪದಾಧಿಕಾರಿಗಳಾದ ಗೀಜಿಗಂಡ ಲೋಕೇಶ್, ತಾಚಿಮಂಡ ಈರಪ್ಪ, ಪೆಮ್ಮಯ್ಯ, ಸೋಮಯ್ಯ ಇದ್ದರು.