ನಾಡು ನುಡಿ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ; ಪ್ರಕಾಶ ಪೂಜಾರ

6-RNR-07
Published on

ರಾಣೆಬೆನ್ನೂರ: ಕನ್ನಡ ನಾಡು ನುಡಿಯನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ನಗರಸಭೆ ಸದಸ್ಯ ಪ್ರಕಾಶ ಪೂಜಾರ ಹೇಳಿದರು.
ಸ್ಥಳೀಯ ಡಾ.ಬಿ.ಆರ್. ಅಂಬೇಡ್ಕರ್, ಹಾವೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಪಂಡಿತ ಪುಟ್ಟರಾಜ ಗಾನ ಕಲಾ ವೇದಿಕೆ ವತಿಯಿಂದ ನಗರದ ಹರಳಯ್ಯ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ನುಡಿ ಸಂಭ್ರಮ, ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆಗೆ ಕನ್ನಡ ಕಲೆ ಸಂಸ್ಕೃತಿ ಕುರಿತು ಪರಿಚಯಿಸಿ ಉಳಿಸಿ ಬೆಳೆಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಹಕಾರಿಯಾಗಿವೆ ಎಂದರು.
ಕಲಾವಿದರಾದ ಜಯಶ್ರೀ ಕಾಳೆ, ಮಮತಾ ಸಾವಕ್ಕನವರ, ಮುತ್ತುರಾಜ ಸಾವಕ್ಕನವರ, ಇಸ್ಮಾಯಿಲ್ ಪ್ರಸ್ತುತ ಪಡಿಸಿದ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು.
ಪ್ರಮುಖರಾದ ಬ್ರಹ್ಮಾನಂದ ಉಜ್ಜೆರ, ಭಾಷಾ ಹಂಪಾಪಟ್ಟಣ, ಮಲ್ಲೇಶಪ್ಪ ಮದ್ಲೇರ, ಬಸವರಾಜ ಸಾವಕ್ಕನವರ, ರಾಜಶೇಖರ ಹೊಸಮನಿ, ಶ್ರೀಧರ ಸಿ., ರಮೇಶ ಕುಸಗೂರು, ವಿರೂಪಾಕ್ಷ ಕಿವುಡಣ್ಣನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net