ವರಿನ್ ಪದಗ್ರಹಣ ದೀಕ್ಷಾ ಸಮಾರಂಭ

Published on

ತುಮಕೂರು :
ತುಮಕೂರು ಹೊರವಲಯದಲ್ಲಿರುವ ವರಿನ್ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ
ಕರ್ತವ್ಯ ಅನುಸಾರ ದೀಕ್ಷಾ ವಿಧಿಯನ್ನು ಪಾಲಿಸಿದರು.
ಮುಖ್ಯ ಅತಿಥಿಗಳಾಗಿದ್ದ ಎಎಸ್‌ಪಿ ಮರಿಯಪ್ಪ ಮಾತನಾಡಿ, ನಿಸ್ವಾರ್ಥ ಸೇವಾ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಶಾಲೆಯ ಕರ್ತವ್ಯ. ಆ ನಿಟ್ಟಿನಲ್ಲಿ ವರಿನ್ ಸಂಸ್ಥೆ ವಿದ್ಯಾರ್ಥಿಗಳಿಗೆ
ನೀಡುತ್ತಿರುವ ನಾಯಕತ್ವದ ತರಬೇತಿ ಉತ್ತಮವಾಗಿದೆ ಎಂದು ಹೇಳಿದರು
ಈ ಸಮಾರಂಭದಲ್ಲಿ ವರಿನ್ ಸಂಸ್ಥೆಯ ಪದಾಧಿಕಾರಿ ಕೃಷ್ಣಯ್ಯ, ವಿರಾಟ್ ಟ್ರಸ್ಟಿನ ಉಪಾಧ್ಯಕ್ಷರಾದ
ಅನ್ನದಾನಯ್ಯ, ಕಾರ್ಯದರ್ಶಿ ಮಮತಾಸುರೇಶ್ ಉಪಸ್ಥಿತರಿದ್ದರು.
ಪ್ರಾಂಶುಪಾಲರು, ಭೋದಕ ಮತ್ತು ಬೋಧಕೇತರ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net