

ಮುಂಬೈ: ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರ ನಿಶ್ಚಿತಾರ್ಥ ನಡೆದಿದೆ. ಕಿಚ್ಚನ ಹೀರೋಯಿನ್ ಎಂಗೇಜ್ ಆಗಿದ್ದಾರೆ. ಈ ಫೋಟೋಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಟಿ ಕೈ ಹಿಡಿಯುತ್ತೀರುವ ನಿಕೋಲಾಯ್ ಸಚ್‌ದೇವ್ ಕುರಿತಾದ ಸಿಕ್ರೇಟ್‌ವೊಂದು ಹೊರ ಬಿದ್ದಿದೆ.
ದಕ್ಷಿಣದಲ್ಲಿ ಲೇಡಿ ವಿಲನ್ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬೆಳೆಯುತ್ತಿರುವ ನಟಿ ವರಲಕ್ಷ್ಮಿ ಶರತ್‌ಕುಮಾರ್ ಇತ್ತೀಚೆಗೆ ನಿಕೊಲಾಯ್ ಸಚ್‌ದೇವ್ ಎಂಬ ಆರ್ಟ್ ಗ್ಯಾಲರಿಸ್ಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಎಲ್ಲರೂ ಈ ಜೋಡಿಯನ್ನು ಅಭಿನಂದಿಸಿದ್ದಾರೆ. ಸದ್ಯದಲ್ಲೇ ಅವರು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ವರಲಕ್ಷ್ಮಿ ಮದುವೆಯಾಗಲು ಹೊರಟಿರುವ ಈ ನಿಕೊಲಾಯ್ ಸಚ್ ದೇವ್ ಈಗಾಗಲೇ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.
ನಿಕೊಲಾಯ್ ಸಚ್‌ದೇವ್ ಈ ಹಿಂದೆ ಕವಿತಾ ಎಂಬ ರೂಪದರ್ಶಿಯನ್ನು ಮದುವೆಯಾಗಿದ್ದರು. ಅವರಿಗೂ ಇಬ್ಬರು ಮಕ್ಕಳಿದ್ದಾರೆ. ನಿಕೊಲಾಯ್ ಸಚ್‌ದೇವ್ ಅವರ ಪುತ್ರಿ ಕಾಶಾ ಸಚ್‌ದೇವ್ ಕೂಡ ಪವರ್‌ಲಿಫ್ಟಿಂಗ್‌ನಲ್ಲಿ ರಾಷ್ಟ್ರಮಟ್ಟದ ಪದಕಗಳನ್ನು ಗೆದ್ದಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ನಿಕೊಲಾಯ್-ಕವಿತಾ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ಕವಿತಾ ಅವರಿಂದ ವಿಚ್ಛೇದನ ಪಡೆದ ನಂತರವೇ ವರಲಕ್ಷ್ಮಿ ಶರತ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.
ಇಷ್ಟು ದೊಡ್ಡ ನಟಿ ಎರಡನೇ ಮದುವೆಯಾಗುತ್ತಿರುವ ವ್ಯಕ್ತಿಯನ್ನು ಯಾಕೆ ಮದುವೆಯಾಗುತ್ತಿದ್ದಾರೆ ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ವರಲಕ್ಷ್ಮಿ ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದರು. ಇದೀಗ ಲವ್ ಮ್ಯಾರೇಜ್ ಆಗಲಿರುವುದರಿಂದ ಎಲ್ಲರಿಗೂ ಆಶ್ಚರ್ಯವಾಗಿದೆ. ಮತ್ತು ಕೆಲವರು ಈಗಾಗಲೇ ವಿಚ್ಛೇದನ ಪಡೆದಿದ್ದಾರೆ ಮತ್ತು ಈಗ ಅವರು ಹೊಸ ಜೀವನವನ್ನು ಪ್ರಾರಂಭಿಸಲು ಹೊರಟಿದ್ದಾರೆ ಎಂದು ಅವರ ಹಿಂದಿನ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.