ಭಾವಿ ಪತಿಯನ್ನು ಟ್ರೋಲ್ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡ ಮಾಣಿಕ್ಯ ನಟಿ!

varalakshmi
Published on

ಚೆನ್ನೈ: ಮಾಣಿಕ್ಯ ಸಿನಿಮಾದ ನಟಿ ವರಲಕ್ಷ್ಮೀ ಶರತ್ ಕುಮಾರ್ ಇತ್ತೀಚೆಗಷ್ಟೇ ನಿಕೋಲಾಯ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ವರಲಕ್ಷ್ಮೀ ಅವರ ಭಾವಿ ಪತಿಯನ್ನು ಟ್ರೋಲ್ ಮಾಡಲಾಗಿತ್ತು. ಇದೀಗ ಟ್ರೋಲ್ ಮಾಡಿದವರಿಗೆ ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ವರಲಕ್ಷ್ಮೀ ಅವರೊಂದಿಗೆ ನಿಕೋಲಾಯ್ ಸಚ್‌ದೇವ್ 2ನೇ ಮದುವೆಯಾಗುತ್ತಿದ್ದಾರೆ. ಅವರಿಗೆ ವಯಸ್ಸಿಗೆ ಬಂದ ಪುತ್ರಿ ಸಹ ಇದ್ದಾಳೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುತ್ತಾರೆ. ಇದೀಗ ನಿಕೋಲಾಯ್ ಜೊತೆ 2ನೇ ಮದುವೆಗೆ ನಟಿ ತಯಾರಾಗಿದ್ದಾಳೆ.

ನಿಕೋಲಾಯ್ ಮತ್ತು ವರಲಕ್ಷ್ಮೀಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಟಿ ವರಲಕ್ಷ್ಮೀ ನನ್ನ ತಂದೆ ಕೂಡ 2ನೇ ಮದುವೆ ಆಗಿದ್ದರು. ಅದರಲ್ಲಿ ಯಾವ ತಪ್ಪಿಲ್ಲ. ನನ್ನ ಕಣ್ಣಿಗೆ ನಿಕ್ ಹ್ಯಾಂಡ್ಸಮ್ ಆಗಿ ಕಂಡಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರ ಬಗ್ಗೆ ನಾನು ಎಂದಿಗೂ ಕೇರ್ ಮಾಡುವುದಿಲ್ಲ ಎಂದು ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net