

31.10.2021-06.11.2021
ಮೇಷ: ಮೇಷಾಧಿಪತಿ ಅಂಗಾರಕನು ಕನ್ಯಾರಾಶಿಯಲ್ಲೇ ಬುಧನೊಂದಿಗೆ ಇದ್ದಾನೆ. ಅಲ್ಲಿಯೇ ರವಿಯೂ ಇದ್ದು, ಅಷ್ಟಮದಲ್ಲಿ ಚತುರ್ಥಗ್ರಹ ಸೇರಿವೆ. ಗುರುವು ದಶಮದಲ್ಲಿ ಇರುವುದರಿಂದ, ಶನಿ ಸ್ವಕ್ಷೇತ್ರದಲ್ಲಿದ್ದು ಯಾವುದೇ ತೊಂದರೆ, ಅತಿರೇಕಗಳಿಗೆ ಅವಕಾಶ ಇಲ್ಲವಾಗುತ್ತದೆ. ಅಪಾಯ ಬಂದರೂ ಉಪಾಯದಿಂದ ದಾಟಬೇಕು. ನ.20 ಏಕಾದಶಕ್ಕೆ ಗುರು ಬರುವುದರಿಂದ ಮುಂದಿನ ದಿನಗಳು ಸುಖಮಯ-ಆನಂದದಾಯಕವಾಗಿ ಇರುತ್ತವೆ. ಜೀವನ ಪರ್ಯಂತ ದೈವಋಣ, ಪಿತೃಋಣವನ್ನು ತೀರಿಸಿದರೆ ಏನನ್ನೂ ಗೆಲ್ಲಬಹುದು. ದೊಡ್ಡ ಸಾಹಸ ಮಾಡಲು ಸಮಯ ಬರುತ್ತದೆ. ಕೈಗಾರಿಕೆ, ವಿದ್ಯುಚ್ಛಕ್ತಿ, ಮಾಹಿತಿ-ತಂತ್ರಜ್ಞಾನ ಎಲ್ಲ ವಿಷಯದಲ್ಲಿ ಮನ್ನಣೆ ಸಾಧಿಸುತ್ತೀರಿ.
ವೃಷಭ: ವೃಷಭ ರಾಶಿಯಲ್ಲಿ ರಾಹುವಿದ್ದು, ಅಷ್ಟಮದಲ್ಲಿ ಶುಕ್ರನಿದ್ದರೂ ಶುಕ್ರನ ಮನೆಯಲ್ಲಿ ರಾಹುವಿರುವುದರಿಂದ ಶುಭಫಲ ಯಾವುದೂ ಬರುವುದಿಲ್ಲ. ಗುರುವು 9ರಲ್ಲಿದ್ದು, ಯಾವುದೇ ಗ್ರಹಗಳು ತೊಂದರೆ ಕೊಡದಂತೆ ಗುರು ಸಂರಕ್ಷಿಸುತ್ತಾನೆ. ‘ಶಿವಶರಣಂ’, ಶ್ರೀರಾಮ ಶರಣಂಮಮ’- ಎರಡೇ ದೈವಸ್ಮರಣೆ ಮಾಡಿದಲ್ಲಿ ನಕಾರಾತ್ಮಕ ಶಕ್ತಿ ಸಕಾರಾತ್ಮಕವಾಗಿ ಸಂತೋಷ ಪಡೆದುಕೊಳ್ಳಬಹುದು.
ಮಿಥುನ: ಮಿಥುನ ರಾಶಿಗೆ ಅಷ್ಟಮದಲ್ಲಿ ಗುರು-ಶನಿ ಇರುವುದರಿಂದ, ಸ್ವಕ್ಷೇತ್ರ ಶನಿಯಿಂದ ಶ್ರೀರಕ್ಷೆಯಾದರೂ ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಬೇಕು. ಕಾಲ-ಕಾಲಕ್ಕೆ ವೈದ್ಯರನ್ನು ಸಂರ್ಪಸಿ ಸಲಹೆ ಪಡೆದು ದೈವಮಾರ್ಗದಲ್ಲಿ ನಡೆದು ನಿಮಗೆ ನೀವೇ ಸಂರಕ್ಷಿಸಿಕೊಳ್ಳಬೇಕು. ಗುರು ಅಷ್ಟಕ ಓದಿರಿ.
ಕಟಕ: ಕರ್ಕಾಟಕ ರಾಶಿಯಲ್ಲಿ ಉಚ್ಚನಾದ ಗುರು, ಸಪ್ತಮದಲ್ಲಿ ಇರುವುದು ಶುಭವನ್ನು ಕೊಡಲು. ದಾನಧರ್ಮವನ್ನು ಮಾಡಿ ಶನಿಯಿಂದ ಆದಿಯಾಗಿ ಕೆಲವು ಪಾಪಗ್ರಹಗಳನ್ನು ಬಾಧಿಸಲಾರವು. ಜೀವನದಲ್ಲಿ ಭಯಬೇಡ. ಭಕ್ತಿಯೊಂದೇ ಮುಕ್ತಿಯನ್ನೂ, ಕಾರ್ಯದಲ್ಲಿ ಜಯವನ್ನೂ ಕೊಡುತ್ತದೆ. ಮನಸ್ಸನ್ನು ಉದ್ವೇಗ ಮಾಡಬೇಡಿ. ಹತೋಟಿಯಲ್ಲಿಡಿ. ಸುಖಕ್ಕೆ ಭಂಗ ಬರುವ ಯಾವುದೇ ಕೆಲಸ ಮಾಡುವ ಅವಶ್ಯಕತೆ ಇಲ್ಲ.
ಸಿಂಹ: ಷಷ್ಠ ಗುರು ಸಪ್ತಮಕ್ಕೆ ಬಂದು ಎಲ್ಲ ಸರಿಪಡಿಸಿ ಬದುಕು ಬಂಗಾರವಾಗುತ್ತದೆ. ಬದುಕಿನಲ್ಲಿ ಪರೋಪಕಾರವೂ ಇರಬೇಕು. ನಿಮಗೆ ಬೇಕಾದ್ದನ್ನು ದೈವ ಕೊಟ್ಟ ಮೇಲೆ ನೀವು ಅವನು ಕೊಟ್ಟದ್ದನ್ನು ಇತರರಿಗೂ ವಿತರಿಸಿ ತೃಪ್ತಿಪಡುವುದೇ ಮನಸಂಕಲ್ಪವಾಗಿರಲಿ. ಈ ರೀತಿ ನಡೆದರೆ ದೈವಸಂಕಲ್ಪ, ಮನಃಸಂಕಲ್ಪ ಪೂರ್ಣಗೊಂಡು ಮನಃಶಾಂತಿಯನ್ನು ಕೊಟ್ಟು ಕಾಪಾಡುತ್ತಾನೆ. ಬೇರೆಯವರಿಗೆ ಕೊಟ್ಟ ಹಣ ವಾಪಸ್ಸು ಬರದಿದ್ದರೆ ಚಿಂತಿಸಬೇಡಿ. ದೈವವೇ ಅವರಿಂದ ಬರುವಂತೆ ಮಾಡುತ್ತದೆ. ಸೂರ್ಯನ ಪ್ರಾರ್ಥನೆ ಇರಲಿ. ಗುರು-ಶನಿಗೆ ಮನಸ್ಸಲ್ಲೇ ಪ್ರಾರ್ಥನೆ ಇರಲಿ.
ಕನ್ಯಾ: ಪಂಚಮದಲ್ಲಿ ಗುರುವಿರುವುದರಿಂದ ನ.20ರವರೆಗೆ ಜೀವನವನ್ನು ಸಮತೋಲನದಲ್ಲಿ ಇಟ್ಟಿರುತ್ತಾನೆ. ಮತ್ತೆ ಪಂಚಮ ಶನಿ-ಷಷ್ಠ ಗುರು ಅವರವರ ಸ್ಥಾನಕ್ಕೆ ಹಿಂತಿರುಗುವುದರಿಂದ, ವಿಚಲಿತರಾಗದೆ ಅಚಲವಾದ ಸಾಮ್ರಾಜ್ಯವನ್ನು ಬೇಡಿ. ಶನಿ ಬದಲಾಗುವರೆಗೆ ಮುಂದುವರಿಸಿಕೊಂಡು ಹೋಗಿ. ಇಂತಹ ಸಮಯದಲ್ಲಿ ದೈವಪ್ರಾರ್ಥನೆ ಅತ್ಯಗತ್ಯ.
ತುಲಾ: ತುಲಾ ರಾಶಿಯವರಿಗೆ ಸೂರ್ಯನು ಬೆಳಕನ್ನು ನೀಡಿದರೂ ಅಂಗಾರಕನು ಕೆಲವೊಂದು ಅಡೆತಡೆಗಳನ್ನು ತರುತ್ತಾನೆ. ಯಾವುದೇ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳಲು ಆತುರ ಮಾಡಬಾರದು. ತುಲಾ ರಾಶಿಯ ಅಧಿಪತಿ ಶುಕ್ರನು ಧನುರ್ ರಾಶಿಯವರಿಗೆ ಚತುರ್ಥದಲ್ಲಿ ಗುರುವಿರುವುದರಿಂದ ಕೆಲವೊಂದು ಮುಖ್ಯ ಕೆಲಸ ನ.20ರ ನಂತರ ಮುಂದುವರಿಸಿ. ಭ್ರಮರಾಂಭಸಹಿತ ಶ್ರೀಮಲ್ಲಿಕಾರ್ಜುನನನ್ನು ಪ್ರಾರ್ಥಿಸಿ. ಸೌಂದರ್ಯ ಲಹರಿ ಪಾರಾಯಣದಿಂದ ಹೆಚ್ಚಿನ ಲಾಭ ಪಡೆಯಿರಿ.
ವೃಶ್ಚಿಕ: ದ್ವಾದಶದಲ್ಲಿ ರವಿ, ಕುಜ ಹಾಗೂ ಅಲ್ಲಿಗೇ ಬುಧನು ನವೆಂಬರ್ 2ರಂದು ಬರುವುದರಿಂದ, ಮೂರೂ ಗ್ರಹಗಳು 12ನೇ ಮನೆಯಲ್ಲಿರುವುದರಿಂದ ವ್ಯವಹಾರ ಮಾಡಲು ಆತುರ ಪಡಬಾರದು. ಕೆಲವೊಂದು ಕೆಲಸಗಳು ನಿರ್ಣಾಯಕ ಘಟ್ಟಕ್ಕೆ ಬಂದಿರುವುದರಿಂದ ನಿಮ್ಮ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. 3ರ ಶನಿ ನಿಮಗೆ ವ್ಯಾಪಾರ-ವಹಿವಾಟುಗಳಲ್ಲಿ ಲಾಭಾಂಶ ಕೊಡುತ್ತಾನೆ. ಮುಖ್ಯ ಕೆಲಸಗಳನ್ನು, ನವೆಂಬರ್ 20ರೊಳಗೆ ಮುಗಿಸಿಕೊಳ್ಳುವುದು ಒಳ್ಳೆಯದು.
ಧನುಸ್ಸು: ಅಕ್ಟೋಬರ್ 30ರಂದು ಶುಕ್ರನು ಗುರುವಿನ ಕ್ಷೇತ್ರಕ್ಕೆ ಬಂದಿದ್ದಾನೆ. ಶನಿ ದ್ವಿತೀಯದಲ್ಲಿದ್ದು, ಕೆಲಸಗಳಲ್ಲಿ ಯಾವುದೇ ಅಡೆತಡೆ ಬರುವುದಿಲ್ಲ. ಧನುರ್ ರಾಶಿಗೆ ದ್ವಿತೀಯ ಗುರು ಲಾಭ ಮತ್ತು ಕೀರ್ತಿಯನ್ನು ತಂದುಕೊಡುತ್ತಾನೆ. ಅದನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. 12ರ ಕೇತುವಿಗೆ ನಾಗೇಶ(ಈಶ್ವರ)ನನ್ನು ಪೂಜಿಸಿ. ಪರಿಹಾರ ಕಂಡುಕೊಳ್ಳಿ.
ಮಕರ: ಮಕರ ರಾಶಿಯವರಿಗೆ ಶುಕ್ರನು ವ್ಯವಹಾರಸ್ಥಾನದಲ್ಲಿರುವುದರಿಂದ ಖರ್ಚು-ವೆಚ್ಚ ಹತೋಟಿಯಲ್ಲಿರಲಿ. ಶನಿ ಸ್ವಕ್ಷೇತ್ರದಲ್ಲಿ ಇರುವುದರಿಂದ ಕೆಲವೊಂದು ಗಂಭೀರ ಸಮಸ್ಯೆ ಉಂಟಾಗಬಹುದು. ಇದಕ್ಕೆ ಪರಿಹಾರ ಎಂದರೆ ಸುಂದರಕಾಂಡ ಪಾರಾಯಣ ಮಾಡಿ. ಹನುಮಂತನನ್ನು ಪೂಜಿಸಿದರೆ ಮನಃಶಾಂತಿ ಸಿಗುತ್ತದೆ.
ಕುಂಭ: ಇನ್ನು ಕೇವಲ 20 ದಿನಗಳಷ್ಟೇ ದ್ವಾದಶದಲ್ಲಿ ಗುರುವಿರುವುದರಿಂದ ಮಹಾಲಕ್ಷ್ಮೀಗೆ ಪ್ರಾರ್ಥನೆ ಸಲ್ಲಿಸಿ. ಸಂಜೆಯಲ್ಲಿ ವಿಶೇಷ ಪ್ರಾರ್ಥನೆ ಮಾಡಿ. ದೀಪಾವಳಿಯ ಧನಲಕ್ಷಿ್ಮೕ ಪೂಜೆಯಂದು ತಪ್ಪದೆ ಮಹಾಲಕ್ಷಿ್ಮೕಯನ್ನು ಪೂಜಿಸಿದರೆ ಸಂಕಟ ಪರಿಹಾರವಾಗಿ ಬರುವ ಕಂಟಕ ಕಟ್ಟಿಹಾಕಬಹುದು. ಮಹಾಲಕ್ಷಿ್ಮೕ ಅಷ್ಟಕ ಪಾರಾಯಣ ಮಾಡಿ. ನಿಂಬೆಹಣ್ಣು ಪಾನಕ, ಕಡಲೆಕಾಳು ಉಸಲಿಯನ್ನು ದೇವರಿಗೆ ನೈವೇದ್ಯ ಮಾಡಿ. ಶಾಂತಿ-ಸುಖ ಲಭಿಸುವುದು.
ಮೀನ: 11ರ ಶನಿ-ಗುರು ನೀವೇನನ್ನೂ ಕೇಳಲೇ ಬೇಕಿಲ್ಲ. ಎಲ್ಲ ಒಳ್ಳೆಯ ಫಲ ಕೊಟ್ಟು ದಾರಿ ತೋರಿಸುತ್ತಾನೆ. ದೈವನಾಮ ಸಂಕೀರ್ತನೆಯೇ ಯಶಸ್ಸಿನ ಗುಟ್ಟು. ವಿದ್ಯಾಬುದ್ಧಿಯನ್ನು ಉಪಯೋಗಿಸಿ ಏನೇ ಕೆಲಸ ಮಾಡಿದರೂ ದೇವರು ಲಾಭ ಮತ್ತು ಕೀರ್ತಿಯನ್ನು ಕೊಟ್ಟು ಕಾಪಾಡುತ್ತಾನೆ.