ಪ್ರಧಾನಿ ಕನಸಿನ ವಂದೇ ಭಾರತ್ ಮೆಟ್ರೋ ರೈಲು ಬೆಂಗಳೂರಿನಿಂದಲೇ ಸಂಚಾರ ಆರಂಭ!

Vande Bharath Metro
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕನಸಿನ ವಂದೇ ಭಾರತ್ ಮೆಟ್ರೋ ರೈಲು ಬೆಂಗಳೂರಿನಲ್ಲೇ ಲೋಕಾರ್ಪಣೆ ಆಗುವ ಸಾಧ್ಯತೆ ಇದೆ ಎಂದು ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಹೇಳಿದ್ದಾರೆ.

ಕೇಂದ್ರದ ಸೂಚನೆ ಮೇರೆಗೆ ವಂದೇ ಭಾರತ್ ಮೆಟ್ರೋ ನಿರ್ವಹಣೆ ಹಾಗೂ ಬ್ಯಾಕ್ ಅಪ್​ಗೆ ಬೇಕಿರುವ ಸಿದ್ಧತೆ ಆರಂಭಿಸಲಾಗಿದೆ. ಸದ್ಯ ವಂದೇ ಭಾರತ್ ಮೆಟ್ರೋ ನಿರ್ವಹಣೆ ಮಾಡಲು ಬೇಕಾಗಿರುವ ಸಂಪನ್ಮೂಲ ಸಿದ್ಧಪಡಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಕೆಲಸ ಸಮರೋಪಾದಿಯಲ್ಲಿ ಸಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ದೂರದೃಷ್ಟಿಯಂತೆ ವಂದೇ ಭಾರತ್ ಮೆಟ್ರೋ ರೈಲುಗಳು ಸಂಚಾರ ಆರಂಭಿಸಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ವಂದೇ ಭಾರತ್ ರೈಲುಗಳ ಜತೆಗೆ ವಂದೇ ಮೆಟ್ರೋ ರೈಲುಗಳು ಶೀಘ್ರದಲ್ಲೇ ಸಂಚಾರಕ್ಕೆ ಬರಲಿವೆ. ಈ ಮೆಟ್ರೋ ರೈಲುಗಳ ತಯಾರಿಕೆ ಈ ವರ್ಷ ಪೂರ್ಣಗೊಳ್ಳಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net