

ಬೆಂಗಳೂರು: ಈ ಸಾಲಿನ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಶಾಸಕರುಗಳಾದ ರಘುಮೂರ್ತಿ, ಶ್ರೀನಿವಾಸ್, ಬಸವನಗೌಡ ದದ್ದಲ್, ಬಿ.ಎಂ.ನಾಗರಾಜು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.
ಈ ಬಾರಿ ಅರ್ಥಪೂರ್ಣವಾದ- ವಾಲ್ಮೀಕಿ ಜಯಂತಿ ಆಚರಣೆ ನಡೆಸೋಣ. ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಭರವಸೆ ನೀಡಿದರು.
ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ 2024ನೇ ೆಯಲ್ಲಿ ಮಾತನಾಡಿದರು.
ಎಸ್ಸಿಎಸ್ಟಿ ಕಾಯ್ದೆ ಮೊದಲಿಗೆ ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ಇಡೀ ದೇಶದಲ್ಲಿ ನಾವು ಮಾತ್ರ. ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ ಎಂದು ವಿವರಿಸಿದರು.
2013-18ರ ವರೆಗೆ ನಾವು ಎಸ್ಸಿಎಸ್ಟಿ ಉಪ ಯೋಜನೆ ಅನುದಾನ ನಿರಂತರವಾಗಿ ನಾವು ಹೆಚ್ಚಿಸಿದೆವು. ನಂತರ ಬಂದ ಸರ್ಕಾರ ಕೊಡಲೇ ಇಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದು ಅನುದಾನ ಹೆಚ್ಚಿಸಿದೆವು. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.