ಬೆಂಗಳೂರು:
ವಾಲ್ಮಿಕಿ ನಿಗಮದ 187 ಕೋಟಿ ರೂ ಹಗರಣದ ಬಗ್ಗೆ 159ನೇ ನಿಯಮ ಅಡಿಯಲ್ಲಿ ನಿಲುವಳಿ ಸೂಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿಯ ಸಿ.ಟಿ.ರವಿ ಪ್ರಯತ್ನಿಸಿದರು.
ನಿಲುವಳಿ ಸೂಚನೆಗೆ ಬಿಜೆಪಿ ಆಗ್ರಹಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸದನ ಪ್ರಾರಂಭವಾಗಿದೆ. ನಿಯಮಾವಳಿ ಪ್ರಕಾರ ಪ್ರಶ್ನೋತ್ತರ ನಡೆಯಬೇಕು. ಈಗ ಅವಕಾಶ ಕೊಡುವುದಿಲ್ಲ ಎಂದರು.
ಹಾಗಾದರೆ ಪ್ರಶ್ನೋತ್ತ ಮುಗಿದ ಮೇಲೆಯೇ ಅವಕಾಶ ನೀಡಬೇಕು ಎಂದು ಸಿಟಿ ರವಿ ಕೇಳಿದಾಗ ಸಭಾಪತಿ ಸಮ್ಮತಿಸಿದರು.