ಸನ್ನಿ ಲಿಯೋನ್ ರೆಸ್ಟೋರೆಂಟ್​​ನಲ್ಲಿ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ವಿಶೇಷ ವ್ಯವಸ್ಥೆ

sunny leone
Published on

ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಹೊಸ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ.   ಈ ರೆಸ್ಟೋರೆಂಟ್​​ನಲ್ಲಿ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಜೋಡಿಗಳಿಗೆ ವಿಶೇಷ ಆಫರ ನೀಡಲಾಗಿದೆ.

ಸನ್ನಿ ಲಿಯೋನ್ ಅವರ ರೆಸ್ಟೋರೆಂಟ್ ಹೆಸರು ಚಿಕಾ ಲೋಕ. ಇದು ನೋಯ್ಡಾದ ಗುಲ್ಶನ್ ಮಾಲ್‌ನಲ್ಲಿದೆ. ಪ್ರೇಮಿಗಳ ದಿನದಂದು 'ಚಿಕಾ ಲೋಕ' ವಿಶೇಷ ವ್ಯವಸ್ಥೆಗಳನ್ನು ನೀಡುತ್ತಿದೆ. ಪ್ರೇಮ ಜೋಡಿಗಳಿಗೆ ಸುಂದರ ಅಲಂಕಾರಗಳಿರುವ ಟೇಬಲ್ ಗಳನ್ನು ಹಾಕುತ್ತಿದ್ದಾರೆ ಎನ್ನಲಾಗಿದೆ.

ಜೋಡಿಗಳಿಗೆ ಸುಂದರ ಅಲಂಕಾರಗಳಿರುವ ಟೇಬಲ್ ಗಳನ್ನು ಹಾಕಲಾಗುತ್ತದೆ. ಖಾಸಗಿ ಟೇಬಲ್‌ಗಳನ್ನು ಸಹ ಬುಕ್ ಮಾಡಬಹುದು. ಲೈವ್ ಬ್ಯಾಂಡ್ ಸಂಗೀತದೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಸಹ ಲಭ್ಯವಿದೆ. ರೆಸ್ಟೋರೆಂಟ್‌ಗೆ ಬರುವ ಪ್ರೇಮಿಗಳಿಗಾಗಿ ಟೆರೇಸ್ ಅನ್ನು ಸುಂದರವಾಗಿ ಅಲಂಕರಿಸಲಾಗಿದೆ ಎಂದು ರೆಸ್ಟೋರೆಂಟ್‌ ವ್ಯವಸ್ಥಾಪಕ ಭೂಪೇಶ್ ಸಿಂಗ್ ತಿಳಿಸಿದ್ದಾರೆ.

ಈ ರೆಸ್ಟೋರೆಂಟ್​​ನಲ್ಲಿ ಸಮಯ ಕಳೆಯುವ ಮೂಲಕ ಈ ವ್ಯಾಲೆಂಟೈನ್ ಅನ್ನು ವಿಶೇಷವಾಗಿಸಿಕೊಳ್ಳಿ. ನೆಲಮಹಡಿ ಹಾಗೂ ತಾರಸಿ ಪ್ರದೇಶಗಳಲ್ಲಿ ವಿಶೇಷ ಟೇಬಲ್ ಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಸನ್ನಿ ಲಿಯೋನ್ ಸದ್ಯ ಬಾಲಿವುಡ್​ನಲ್ಲಿ ಹಲವಾರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿಯೂ ಅತಿಥಿ ಪಾತ್ರಗಳಲ್ಲಿ ಸ್ಪೆಷಲ್ ಸಾಂಗ್​ಗಳಲ್ಲಿ ಆಗಾಗ ಕಾಣಿಸಿಕೊಳ್ತಾರೆ ಸನ್ನಿ ಲಿಯೋನ್. ಇದೀಗ ಉತ್ತರ ಪ್ರದೇಶದ ನೋಯ್ಡಾದಲ್ಲಿ ಹೊಸ ರೆಸ್ಟೋರೆಂಟ್ ಓಪನ್ ಮಾಡುವ ಮೂಲಕವಾಗಿ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net