ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ

Former Dutch PM And Wife Die Together Hand In Hand Via Duo Euthanasia
Published on

ನೆದರ್ಲ್ಯಾಂಡ್: ಡಚ್ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆಗ್ಟ್ ಅವರು ತಮ್ಮ ಪತ್ನಿ ನಿಜ್ಮೆಗನ್‌. 93 ವರ್ಷ ವಯಸ್ಸಿನ ಈ ದಂಪತಿ ಪರಸ್ಪರ  ಕೈ ಕೈ ಹಿಡಿದು ಕೊಂಡು ಪ್ರಾಣ ಬಿಟ್ಟಿದ್ದಾರೆ.

93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ದಯಾಮರಣದ ಮೂಲಕ ಜತೆಯಾಗಿಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತಮ್ಮ ಹುಟ್ಟೂರಾದ ನಿಜ್ಮೆಗನ್‌ನಲ್ಲಿ ಈ ಜೋಡಿ ಸಾವನ್ನಪ್ಪಿದ್ದಾರೆ.

ಪತ್ರಿಕಾ ಟಿಪ್ಪಣಿಯ ಪ್ರಕಾರ,  ಆಗ್ಟ್ ಮತ್ತು ಅವರ ಪತ್ನಿ ಇಬ್ಬರೂ ಸಾಯುವ ಮೊದಲು ಸ್ವಲ್ಪ ಸಮಯ ಮೊದಲು ಅವರು  ಅನಾರೋಗ್ಯದಿಂದ ಬಳಲುತ್ತಿದ್ದರು. ರೈಟ್ಸ್ ಫಾರಂ ಸಂಸ್ಥೆ ಈಗ ಈ ಹಿರಿಯ ದಂಪತಿ ನಿಧನದ ವಿಚಾರವನ್ನು ಅಧಿಕೃತಪಡಿಸಿದೆ.

ಡ್ರೈಸ್ ವ್ಯಾನ್ ಆಗ್ಟ್ ಅವರು ಫೆಬ್ರವರಿ 5 ರಂದು ತಮ್ಮ ಊರು ನಿಜ್ಮೆಗನ್‌ನಲ್ಲಿ ಇಹಲೋಕ ತ್ಯಜಿಸಿದ್ದಾರೆ.  ತಮ್ಮ ಪತ್ನಿ ಯುಜೆನಿ ವ್ಯಾನ್  ಜೊತೆಯಾಗಿಯೇ ಇವರು ಸಾವನ್ನಪ್ಪಿದ್ದು, ಇಬ್ಬರು ಪರಸ್ಪರ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟಿದ್ದಾರೆ. ಇವರಿಬ್ಬರೂ ಪರಸ್ಪರ ಬೆಂಬಲದೊಂದಿಗೆ ಸುಮಾರು 70 ವರ್ಷಗಳ ಕಾಲ ಜೊತೆಯಾಗಿದ್ದರು. ಸಾಯುವವರೆಗೂ ಪತ್ನಿಯನ್ನು ಸದಾ ನನ್ನ ಹುಡುಗಿ ಎಂದು ಕರೆಯುತ್ತಿದ್ದರು, ಇವರ ಅಂತ್ಯಸಂಸ್ಕಾರ ಕಾರ್ಯವೂ ಖಾಸಗಿಯಾಗಿ ನಡೆದಿದೆ. ವ್ಯಾನ್ ಆಗ್ಟ್ ಮತ್ತು ಅವರ ಪತ್ನಿ ಯುಜೆನಿ ವ್ಯಾನ್ ಇಬ್ಬರಿಗೂ 93 ವರ್ಷ ವಯಸ್ಸಾಗಿತ್ತು ಎಂದು ರೈಟ್ಸ್ ಫಾರಂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಡ್ರೈಸ್ ವ್ಯಾನ್ ಆಗ್ಟ್ ಅವರು 1977ರಿಂದ 1982ರವರೆಗೆ ನೆದರ್ಲ್ಯಾಂಡ್‌ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೇ ಸಮಯದಲ್ಲಿ ಅವರು ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಸ್ಥಾಪಕ ನಾಯಕರಾದರು. 2009ರಲ್ಲಿ ಇವರು  ದಿ ರೈಟ್ಸ್ ಫೋರಮ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು, ಇದು ಪ್ಯಾಲೇಸ್ಟಿನಿಯನ್ ಹಕ್ಕುಗಳಿಗಾಗಿ ಹೋರಾಡಲು ಮೀಸಲಾದ ಸಂಸ್ಥೆಯಾಗಿತ್ತು.

ನಿಗದಿತ ವೈದ್ಯಕೀಯ ಕಾರಣವಿಲ್ಲದೇ ಈ ದಯಾಮರಣದಂತಹ ಪ್ರಕ್ರಿಯೆಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅನುಮತಿ ಇಲ್ಲ. ಆದರೂ ನೆದರ್ಲ್ಯಾಂಡ್‌ನಲ್ಲಿ ಈ ಪ್ರಕ್ರಿಯೆ ಕ್ರಮೇಣ ಹೆಚ್ಚಾಗಿದ್ದು, ಕೇವಲ 2022ರ ಒಂದು ವರ್ಷದಲ್ಲೇ 58 ಜನ ದಯಾಮರಣ ಪಡೆದಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net