

ಆಂಧ್ರಪ್ರದೇಶ: ಆನಂದ್ ದೇವರಕೊಂಡ ಜತೆ 'ಬೇಬಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ವೈಷ್ಣವಿ ಚೈತನ್ಯ ತಮ್ಮ ನಟನೆಯ ಮೂಲಕ ಇದೀಗ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ವೈಷ್ಣವಿ ಕುರಿತು ಟಾಲಿವುಡ್, ಕಾಲಿವುಡ್ನಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಹಲವರ ಚಿತ್ರಕ್ಕೆ ಇವರೇ ನಾಯಕಿ ಎಂದು ಹೇಳಲಾಗುತ್ತಿದೆ.
ಈ ಪೈಕಿ ನಿರ್ದೇಶಕ ಪುರಿ ಜಗನ್ ನಿರ್ದೇಶನದ 'ಡಬಲ್ ಇಸ್ಮಾರ್ಟ್' ಚಿತ್ರಕ್ಕೆ ವೈಷ್ಣವಿ ಹಿರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಎಂಬ ವದಂತಿಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ರಾಮ್ ಪೋತಿನೇನಿ ನಾಯಕನಾಗಿ ಕಾಣಿಸಿಕೊಳ್ಳಲಿರುವ ಚಿತ್ರಕ್ಕೆ ಡೈರೆಕ್ಟರ್ ಪುರಿ ಜಗನ್ ವೈಷ್ಣವಿ ಅವರನ್ನು ತಮ್ಮ ಚಿತ್ರಕ್ಕೆ ನಾಯಕಿಯಾಗಿ ಇವರೇ ನಟಿಸಲಿ ಎಂದು ಹೇಳಿದ್ದಾರೆ. ಇದಕ್ಕೆ ನಟ ರಾಮ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸದ್ಯ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿಯೂ ಪ್ರಕಟವಾಗಿಲ್ಲ. ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ನಿರ್ದೇಶಕ ಪುರಿ ಜಗನ್ ಅವರ ಸಿನಿಮಾಗಳ ಮೇಲೆ ಸಿನಿಪ್ರಿಯರಿಗೆ ಭಾರೀ ನಿರೀಕ್ಷೆಗಳಿದ್ದು, ಚಿತ್ರದ ಬಗ್ಗೆ ಮುಂದಿನ ಅಪ್ಡೇಟ್ ಏನಿರಲಿದೆ ಎಂಬ ಕುತೂಹಲ ಇದೀಗ ಹೆಚ್ಚಿದೆ ಎಂದೇ ಹೇಳಬಹುದು,(ಏಜೆನ್ಸೀಸ್).