ವೈಕುಂಠ ಏಕಾದಶಿ: ಎಲ್ಲೆಡೆ ಮೊಳಗುತ್ತಿದೆ ಗೋವಿಂದ ನಾಮಸ್ಮರಣೆ, ವೈಕುಂಠ ದ್ವಾರ ಪ್ರವೇಶಿಲು ಹರಿದುಬಂದ ಭಕ್ತಸಾಗರ

Vaikuntha Ekadashi
Published on

ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಇಂದು ರಾಜ್ಯಾದ್ಯಂತ ವಿಷ್ಣು, ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ದ್ವಾರಗಳೊಂದಿಗೆ ವಿಶೇಷ ಪೂಜೆ ನಡೆಯುತ್ತಿದ್ದು, ಸಹಸ್ರಾರು ಭಕ್ತರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಎಲ್ಲೆಡೆ ಗೋವಿಂದ ನಾಮ ಸ್ಮರಣೆ ಮೊಳಗುತ್ತಿದೆ.

ಪುಷ್ಯ ಮಾಸದ ಶುಕ್ಲ ಪಕ್ಷ ಸೋಮವಾರ ವೈಕುಂಠ ಏಕಾದಶಿಯ ಈ ಶುಭ ದಿನದಂದು ವೈಕುಂಠದ ಉತ್ತರದ ಬಾಗಿಲಿನ ಮೂಲಕ ಶ್ರೀಮನ್ನಾರಾಯಣ ದೇವರು ಮೂರು ಕೋಟಿ ದೇವಾನುದೇವತೆಗಳಿಗೆ ದರುಶನ ನೀಡಿದನು ಎಂಬ ಪ್ರತೀತಿ ಇದೆ. ಹಾಗಾಗಿ ಈ ದಿನದಂದು ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಲಾಗಿದ್ದು, ಭಕ್ತರ ದಂಡೇ ಹರಿದುಬರುತ್ತಿದೆ.

ಬೆಂಗಳೂರಿನ ವೈಯಾಲಿಕಾವಲ್​ನಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಅಶ್ವಥನಾರಾಯಣ, ಮುನಿರತ್ನ ದೇವರ ದರ್ಶನ ಪಡೆದರು. ನಗರದ ಕೋಟೆ ವೆಂಕಟೇಶ್ವರಸ್ವಾಮಿ ದೇವಾಲಯ, ವೈಯಾಲಿಕಾವಲ್‌ನ ಟಿಟಿಡಿ, ರಾಜಾಜಿನಗರ ಹಾಗೂ ವಸಂತಪುರದ ಇಸ್ಕಾನ್ ದೇವಾಲಯಗಳು, ಮಹಾಲಕ್ಷ್ಮೀ ಲೇಔಟ್‌ನ ಶ್ರೀನಿವಾಸ ದೇವಸ್ಥಾನ, ಶ್ರೀನಿವಾಸನಗರದ ಲಕ್ಷ್ಮೀವೆಂಕಟೇಶ್ವರ ದೇವಾಲಯ, ಜೆ.ಪಿ.ನಗರ ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಎಂ.ಜಿ.ರೈಲ್ವೆ ಕಾಲನಿಯ ವೆಂಕಟೇಶ್ವ, ಬಡವರ ತಿರುಪತಿ ಎಂದೇ ಹೆಸರಾದ ಗುಟ್ಟಹಳ್ಳಿಯ ಬಂಗಾರು ತಿರುಪತಿ ಸನ್ನಿಧಾನ... ಸೇರಿದಂತೆ ವಿಷ್ಣು ದೇಗುಲಗಳಲು ತಿರುಪತಿಯಂತೆ ಕಂಗೊಳಿಸುತ್ತಿದ್ದು, ವೈಕುಂಠವೇ ಧರೆಗಿಳಿದಂತೆ ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net