ಮದುವೆಯ ದಿನವೇ ಮುಟ್ಟಾಗಿದ್ದಳಾಕೆ...

Marriage age
Published on

ವಡೋದರಾ: ವೃತ್ತಿಯಲ್ಲಿ ಶಿಕ್ಷಕಿ ಆಕೆ. ಆತ ಖಾಸಗಿ ಕಂಪನಿಯಲ್ಲಿ ನೌಕರ. ಈ ವರ್ಷ ಜನವರಿ ತಿಂಗಳಲ್ಲಿ ಅವರ ವಿವಾಹವಾಗಿತ್ತು. ಎಲ್ಲವೂ ಸರಿಯಾಗಿದ್ದರೆ ದಾಂಪತ್ಯವೂ ಸರಿಯಾಗಿರುತ್ತಿತ್ತೇನೋ. ಆದರೆ ಇವರ ಡಿವೋರ್ಸ್​ಗೆ 'ಋತುಸ್ರಾವ'ವೇ ಕಾರಣವಾಯ್ತಾ?!!

ಡಿವೋರ್ಸ್​ಗಾಗಿ ವಡೋದರಾ ಫ್ಯಾಮಿಲಿ ಕೋರ್ಟ್​ ಮೆಟ್ಟಿಲೇರಿರುವ ಪತಿ, ಅದಕ್ಕೆ ಕೊಟ್ಟಿರುವ ಕಾರಣ ದೇಶದ ಗಮನಸೆಳೆದಿದೆ. ಮದುವೆಯ ದಿನ ಪತ್ನಿ ಮುಟ್ಟಾಗಿದ್ದಳು. ಆದರೆ ಈ ವಿಚಾರವನ್ನು ಮುಚ್ಚಿಟ್ಟಿದ್ದಳು. ಸಂಪ್ರದಾಯ ಪ್ರಕಾರ ಮುಟ್ಟಾಗಿದ್ದಾಗ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಇದು ಗೊತ್ತಿದ್ದೂ ಆಕೆ ವಿಷಯ ಮುಚ್ಚಿಟ್ಟಿದ್ದಳು. ವಿವಾಹ ಮುಗಿಸಿ ದೇವಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ ಒಳಕ್ಕೆ ಬಾರದೆ ಹೊರಗೆ ನಿಂತ ಸಂದರ್ಭದಲ್ಲಿ ಆಕೆ ಈ ವಿಚಾರ ಬಹಿರಂಗಪಡಿಸಿದ್ದಳು.

ಏನೋ ಅರಿಯದೆ ಮಾಡಿದ ತಪ್ಪು ಎಂದು ಇದನ್ನು ಕ್ಷಮಿಸಿಬಿಡಬಹುದಿತ್ತು. ಆದರೆ, ಮದುವೆಯ ದಿನ ರಾತ್ರಿ ಆಕೆ ಐಷಾರಾಮಿ ಜೀವನದ ಕನಸುಗಳನ್ನು ಹಂಚಿಕೊಂಡು ಇನ್ನು ಮೇಲೆ ತಿಂಗಳಿಗೆ 5,000 ರೂಪಾಯಿ ನನಗೆ ಕೊಡಬೇಕು. ಮನೆಯಲ್ಲಿ ನಾವಿರುವ ಕೊಠಡಿಗೆ ಹವಾನಿಯಂತ್ರಕವನ್ನು ಅಳವಡಿಸಬೇಕು. ಕುಟುಂಬ ನಿರ್ವಹಣೆಗೆ ಸಹೋದರ ಹಣ ಪಾವತಿಸುತ್ತಿದ್ದಾನೆ. ಅದು ಸಾಕು. ಅದರಲ್ಲಿ ಅವರು ನಿರ್ವಹಿಸಿಕೊಳ್ಳಲಿ ಎಂದಾಗ, ಇದು ಸಾಧ್ಯವಿಲ್ಲ ಎಂದೆ ನಾನು. ಅದಕ್ಕೆ ಆಕೆ, ನಾನು ಹತ್ತು ಜನರ ಜೊತೆ ರಾತ್ರಿ ಮಲಗ್ಲಾ ಎಂದು ಕೇಳಿ ಬೆಚ್ಚಿ ಬೀಳುವಂತೆ ಮಾಡಿದ್ದಳು.

ಈ ಬೇಡಿಕೆ ಈಡೇರಿಸುವುದು ಕಷ್ಟವಾಗಿತ್ತು. ಕೆಲವು ದಿನಗಳ ನಂತರ ಸರಿ ಹೋಗಬಹುದು ಎಂಬ ಆಶಯದೊಂದಿಗೆ ದಾಂಪತ್ಯ ಮುಂದುವರಿದಿತ್ತು. ಆದರೆ, ಆಕೆ ತವರಿಗೆ ಹೋಗಿ ಹಲವು ದಿನಗಳ ತನಕ ವಾಪಸ್ ಬಾರದೇ ಇರುವುದು ಮುಂದುವರಿಯಿತು. ಇತ್ತೀಚೆಗೆ ಹೋದಾಗ ಟೆರೇಸ್​ನಿಂದ ಹಾರಿ ಪ್ರಾಣತ್ಯಾಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದಳು. ಹೀಗಾಗಿ, ಅನಿವಾರ್ಯವಾಗಿ ದಾಂಪತ್ಯ ಮುರಿದುಕೊಳ್ಳಲು ನಿರ್ಧರಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net