

ಕೋಲಾರ: ಪತ್ರಿಕಾ ರಂಗಕ್ಕೆ ದಿ.ವಡ್ಡರ್ಸೆ ರಘುರಾಮ ಶೆಟ್ಟರು ವಿಶ್ವವಿದ್ಯಾಲಯವಿದ್ದಂತೆ. ಈಗಿನ ಪತ್ರಕರ್ತರಿಗೆ ಅವರು ದಾರಿದೀಪ ಎಂದು ಲೇಖಕ, ಹಿರಿಯ ಪತ್ರಕರ್ತ, ವಿಜಯವಾಣಿಯ ವಿಶ್ವ ಕುಂದಾಪುರ ಬಣ್ಣಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ-ನಮ್ಮ ನಡೆ ಬಳಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂ, ಸಿರಿಗನ್ನಡ ಪುಸ್ತಕ ಮಳಿಗೆ ಸಹಕಾರದಲ್ಲಿ ಹಮ್ಮಿಕೊಂಡಿದ್ದ "ಓದುಗ ಕೇಳುಗ &ನಮ್ಮ ನಡೆ' 40ನೇ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸ್ಥಿರ ಸರ್ಕಾರವಿದ್ದರೆ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು. ಏಕೆಂದರೆ ಆಗ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಏಕಪಯ ನಿಲುವು ಇರುವುದಿಲ್ಲ ಎಂಬುದು ಅವರ ವಾದವಾಗಿತ್ತು. ಜತೆಗೆ ಕೆಲ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಹೊರಟಾಗ ಪರಿಸರಕ್ಕೆ ಹಾನಿ ಎಂಬ ಹೋರಾಟ ಶುರುವಾಯಿತು. ಆದರೆ, ವಡ್ಡರ್ಸೆ ಅವರು ಅದನ್ನು ವಿರೋಧಿಸದೆ ಬದುಕನ್ನು ಕಟ್ಟುವುದು ಅಭಿವೃದ್ಧಿ ಎಂಬ ನೆಲೆಯಲ್ಲಿ ಅಭಿವೃದ್ಧಿ ಪರವಾದ ಧೋರಣೆ ತಳೆದರು ಎಂದು ತಿಳಿಸಿದರು.
ವಿವಿ ಅಧ್ಯಯನ ಪೀಠ ಸ್ಥಾಪಿಸಿ
ವಡ್ಡರ್ಸೆ ರುರಾಮ ಶೆಟ್ಟರ ಹೆಸರಿನಲ್ಲಿ ರಾಜ್ಯಸರ್ಕಾರ ಈಚೆಗೆ ಪ್ರಶಸ್ತಿ ಸ್ಥಾಪಿಸಿರುವುದು ಉತ್ತಮ ಕೆಲಸ. ಇದರ ಜತೆಗೆ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಲ್ಲಿ ಅಧ್ಯಯನ ಪೀಠ ಆರಂಭಿಸಬೇಕು, ಇದಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ವಿಶ್ವ ಕುಂದಾಪುರ ಸಲಹೆ ನೀಡಿದರು. 80ರ ದಶಕದಲ್ಲಿ ಮುಂಗಾರು ಪತ್ರಿಕೆ ಆರಂಭಿಸಿದ ಅವರು ಶೋಷಿತರು, ಪತ್ರಿಕೆಯನ್ನು ಪ್ರಾಮಾಣಿಕವಾಗಿ ನಡೆಸುತ್ತಿದ್ದ ಸಮಾಜವಾದಿ ಚಿಂತಕರೂ ಆಗಿದ್ದರು. ದಮನಿತರು ಹಾಗೂ ಶ್ರಮಿಕ ವರ್ಗದ ಧ್ವನಿಯಾಗಿ, ಸಾಮಾಜಿಕ ಕಳಕಳಿ ಹೊಂದಿದ್ದರು. ಪತ್ರಕರ್ತರಿಗೆ ಕೆಲಸ ನೀಡಿದ್ದು ಮಾತ್ರವಲ್ಲದೆ, ಅವರನ್ನು ಬೆಳೆಸಿದರು. ರಾಜಕೀಯ, ಶಿಕ್ಷಣ, ವಿದ್ಯುತ್, ನೀರಾವರಿ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು ಎಂದು ವಿವರಿಸಿದರು.
ಪತ್ರಕರ್ತ, ಲೇಖಕ ದಿನೇಶ್ ಅಮಿನ್ ಮಟ್ಟು ಸಂಪಾದಿಸಿರುವ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಸಂಕಲನ "ಬೇರೆಯೇ ಮಾತು' ಕೃತಿ ಬಗ್ಗೆ ಪತ್ರಕರ್ತ ಕೆ.ಓಂಕಾರಮೂರ್ತಿ ಮಾತನಾಡಿದರು.
ನಂತರ ನಡೆದ ಸಂವಾದದಲ್ಲಿ ಪರಿಸರ ಲೇಖಕ ಎಚ್.ಎ.ಪುರುಷೋತ್ತಮರಾವ್, ವಕ್ಕಲೇರಿ ರಾಜಪ್ಪ, ರವೀಂದ್ರ ಸಿಂಗ್, ವಿ.ಮುನಿವೆಂಕಟಪ್ಪ, ಎಚ್.ಎ.ಪಿ.ರಾವ್ ಪಾಲ್ಗೊಂಡಿದ್ದರು.
ವಿಮರ್ಶಕ ವಿ.ಚಂದ್ರಶೇಖರ ನಂಗಲಿ, ಉಪನ್ಯಾಸಕ ಜೆ.ಜಿ.ನಾಗರಾಜ್, ಶ್ರೀನಿವಾಸ ಪ್ರಸಾದ್, ರುರಾಮೇಗೌಡ, ಹರೀಶ್, ಭವಾನಿ ಶಂಕರ, ನೀಲಕಂಠೇಗೌಡ, ಮಮತಾ ಕುಂದಾಪುರ, ಶೋಭಾ ಶಾಸ್ತ್ರಿ, ಧನಲಕ್ಷ್ಮಿ ಪುರುಷೋತ್ತಮ, ಶಂಕರಪ್ಪ, ದಯಾನಂದ್, ನಡುಪಳ್ಳಿ ಮಂಜುನಾಥ ಇದ್ದರು.