

ಬೆಂಗಳೂರು: "ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾಪೋರ್ರೇಷನ್ ಲಿಮಿಟೆಡ್' (ಐಆರ್ಸಿಟಿಸಿ) ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಆ.22 ತನ್ನ ಗ್ರಾಹಕರಿಗೆ 11 ದಿನಗಳ ಉತ್ತರಾಖಂಡ ಪ್ಯಾಕೇಜ್ ಪ್ರವಾಸ ಆಯೋಜಿಸಿದೆ.
ಬೆಂಗಳೂರಿನಿಂದ ಆ.22ರಂದು ರೈಲು ಹೊರಡಲಿದ್ದು, ಪ್ರವಾಸಿಗರು ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಯಿಂದ ರೈಲು ಹತ್ತಬಹುದಾಗಿದೆ. ನೈನಿತಾಲ್& ನೈನಾ ದೇವಿ ದೇವಸ್ಥಾನ, ಕೈಂಚಿ ಧಾಮ್ ದೇವಸ್ಥಾನ, ಅಲ್ಮೋರಾ& ನಂದಾ ದೇವಿ ದೇವಸ್ಥಾನ, ಕಸರ್ ದೇವಿ ದೇವಸ್ಥಾನ, ಜಾಗೇಶ್ವರ್ ಧಾಮ್, ಗೋಲು ಚಿತೈ ದೇವಸ್ಥಾನ, ಕಥರ್ಮಲ್ ದೇವಸ್ಥಾನ, ಕೌಸನಿ& ಬೈಜನಾಥ್ ದೇವಸ್ಥಾನ, ಬಾಗೇಶ್ವರ್ ದೇವಸ್ಥಾನ ಭೇಟಿ ನೀಡುವ ಸ್ಥಳಗಳಾಗಿವೆ. ಒಬ್ಬರಿಗೆ ಸ್ಟಾ$ಂಡರ್ಡ್ 28,020 ರೂ. ಹಾಗೂ ಡಿಲಕ್ಸ್ 35,340 ರೂ. ಶುಲ್ಕ ನಿಗದಿಪಡಿಸಲಾಗಿದೆ.
7 ದಿನಗಳ ಶ್ರೀಲಂಕಾ, ಭೂತಾನ್ ಪ್ರವಾಸ
ಐಆರ್ಸಿಟಿಸಿ ಆ.21ರಂದು ಶ್ರೀಲಂಕಾಗೆ ಪ್ಯಾಕೇಜ್ ಪ್ರವಾಸ ಆಯೋಜಿಸಿದೆ. 7 ದಿನಗಳ ಪ್ರವಾಸ ಇದಾಗಿದ್ದು, ಒಬ್ಬರಿಗೆ 65,650 ರೂ. ನಿಗದಿಪಡಿಸಿದೆ. ಕೊಲಂಬೊ, ದಂಬುಲ್ಲಾ, ಟ್ರಿಂಕೋಮಲೀ, ಕ್ಯಾಂಡಿ, ನೂವಾರ ಎಲಿಯ ಶ್ರೀಲಂಕಾದಲ್ಲಿ ಭೇಟಿ ನೀಡುವ ಸ್ಥಳಗಳಾಗಿವೆ. ಭೂತಾನ್ ಪ್ರವಾಸವು ಸೆ.5ರಿಂದ ಪ್ರಾರಂಭವಾಗುತ್ತಿದ್ದು, ಪಾರೋ, ಪುನಾಖಾ ಹಾಗೂ ಥಿಂಪು ಸ್ಥಳಗಳನ್ನು ಒಳಗೊಂಡಿವೆ. ಪ್ಯಾಕೇಜ್ ಪ್ರವಾಸ ಇದಾಗಿದ್ದು, ಒಬ್ಬರಿಗೆ 78,500 ಶುಲ್ಕ ಇರಲಿದೆ.
ಪ್ಯಾಕೇಜ್ನಲ್ಲಿ ಟಿಕೆಟ್ ದರ, ವಸತಿ, ಉಪಾಹಾರ ಪ್ರೇಕ್ಷಣಿಯ ಸ್ಥಳ ವೀಸಲು ವಾಹನ ವ್ಯವಸ್ಥೆ, ಪ್ರವಾಸ ಮಾರ್ಗದರ್ಶಿ, ಪ್ರಯಾಣ ವಿಮೆ ಸೌಕರ್ಯ ಒಳಗೊಂಡಿದೆ. ಬುಕಿಂಗ್ಗೆ ವೆಬ್ಸೈಟ್: ಐಆರ್ಸಿಟಿಸಿ ವೆಬ್ಸೈಟ್ ಪರಿಶೀಲಿಸಿ. ದೂ.ಸಂ.: 9003140710/708 (ಬೆಂಗಳೂರು), 85959 31294 (ಮೈಸೂರು), 85959 31293/291 (ಹುಬ್ಬಳ್ಳಿ) ಸಂಪರ್ಕಿಸಿ.