ಕಾರ್ಯಕ್ರಮವೊಂದರ ವೇದಿಕೆ ಕುಸಿದು 7 ಮಂದಿ ಸಾವು, 40 ಮಂದಿಗೆ ಗಾಯ..wooden stage collapses

uttar pradesh wooden stage collapses during nirvana mahotsav
Published on

ಉತ್ತರಪ್ರದೇಶ : ( wooden stage collapses  )ಇಂದು ಬೆಳಗ್ಗೆ ಆದಿನಾಥ ದೇವರ ಉತ್ಸವದ ವೇಳೆ  ವೇದಿಕೆ ಕುಸಿದು ಬಿದ್ದಿದೆ. ಈ ಅವಘಡದಲ್ಲಿ 7 ಭಕ್ತರು ಸಾವನ್ನಪ್ಪಿದ್ದಾರೆ. ಇತರ 40 ಮಂದಿ ಗಾಯಗೊಂಡಿದ್ದಾರೆ. ಬರೌತ್ ನಗರದ ಕೊತ್ವಾಲಿ ಪ್ರದೇಶದ ಗಾಂಧಿ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಅಪಘಾತ ನಡೆದ ತಕ್ಷಣ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿತ್ತು. ಅಲ್ಲದೆ ಕಾಲ್ತುಳಿತವನ್ನು ನಿಯಂತ್ರಿಸುತ್ತಿದ್ದ ಐವರು ಪೊಲೀಸರಿಗೂ ಗಾಯಗಳಾಗಿವೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಡಿಎಂ ಅಸ್ಮಿತಾ ಲಾಲ್ ಮತ್ತು ಎಸ್ಪಿ ಅರ್ಪಿತ್ ವಿಜಯವರ್ಗಿಯಾ ಅವರು  ಗಾಯಾಳುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಶ್ರೀ ದಿಗಂಬರ ಜೈನ್ ಪದವಿ ಕಾಲೇಜಿನ ಮೈದಾನದಲ್ಲಿ ಈ ಕಾರ್ಯಕ್ರಮದ ಸಂಘಟಕರು ವೇದಿಕೆಯನ್ನು ನಿರ್ಮಿಸಿದ್ದಾರೆ. 4-5 ಅಡಿ ಎತ್ತರದ ದೇವರ ಮೂರ್ತಿಯನ್ನು ಮೇಲೆ ಇರಿಸಲಾಗಿತ್ತು. ಭಕ್ತರು ಮೇಲಂತಸ್ತಿನ ಮೆಟ್ಟಿಲುಗಳನ್ನು ಹತ್ತಿ ದೇವರನ್ನು ತಲುಪುತ್ತಿದ್ದರು. ಅಷ್ಟರಲ್ಲಿ ತೂಕ ಹೆಚ್ಚಾದ ಕಾರಣ ಇಡೀ ವೇದಿಕೆ ಕುಸಿದು ಕೆಳಗೆ ಬಿದ್ದಿತು. ಜನರು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು. ಉಳಿದವರು ಪ್ರಾಣ ಉಳಿಸಿಕೊಳ್ಳಲು ಇತ್ತ ಓಡತೊಡಗಿದರು.

ಆಗ ಅಲ್ಲಿ ಕಾಲ್ತುಳಿತ ಉಂಟಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ. ಪೊಲೀಸ್ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾಗ್ಪತ್ ಜಿಲ್ಲೆಯಲ್ಲಿ ನಡೆದ ಘಟನೆಯ ಬಗ್ಗೆ, ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net