ಮದುವೆಯಾಗಿ ಎರಡೇ ದಿನಕ್ಕೆ ಗಂಡನ ತಲೆ ಒಡೆದು ಪರಾರಿಯಾದ ಹೆಂಡತಿ!

marriage
Published on

ಲಖನೌ: ಮದುವೆಯಾಗಿ ಒಂದು ತಿಂಗಳಾದರೂ ಅದೇ ಗುಂಗಿನಲ್ಲಿ ಇರುವವರು ಇದ್ದಾರೆ. ಆದರೆ ಇಲ್ಲೊಂದು ಜೋಡಿ ಕಥೆ ಬೇರೆಯದ್ದೇ ಇದೆ. ಮದುವೆಯಾಗಿ ಎರಡೇ ದಿನಕ್ಕೆ ಗಂಡನ ತಲೆ ಒಡೆದು ಹೋದ ಹೆಂಡತಿಯಿಂದಾಗಿ ಇದೀಗ ದಾಂಪತ್ಯ ಅಂತ್ಯಕಂಡಿದೆ.

ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ನುರ್ಪುರದ ಚಂದ್ರಶೇಖರ್​ ಹೆಸರಿನ ಯುವಕ ಮಾರ್ಚ್​ 15ರಂದು ಹರಿದ್ವಾರ ಮೂಲದ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಆದರೆ ದಾಂಪತ್ಯ ಆರಂಭವಾದ ಎರಡೇ ದಿನಗಳಲ್ಲಿ ಹೆಂಡತಿ ಹೊಸ ವರಸೆ ತಗೆದಿದ್ದಾಳಂತೆ. ನನಗೆ ಬೇರೊಬ್ಬ ಯುವಕನೊಂದಿಗೆ ಸಂಬಂಧವಿದೆ. ನಾನು ಅವನೊಂದಿಗೆ ಸಂಪರ್ಕದಲ್ಲಿರಬೇಕು. ಅದಕ್ಕಾಗಿ ನನಗೆ ಹೊಸ ಮೊಬೈಲ್​ ಕೊಡಿಸು ಎಂದು ಗಂಡನಲ್ಲಿ ಕೇಳಿದ್ದಾಳಂತೆ. ಅದಾದ ನಂತರ ಅವರಿಬ್ಬರ ನಡುವೆ ಈ ವಿಚಾರಕ್ಕೆ ಜಗಳವಾಗಿದೆ. ಗಂಡನ ತಲೆಗೆ ಕಬ್ಬಿಣದ ಸರಳಿನಿಂದ ಹೆಂಡತಿ ಜೋರಾಗಿ ಹೊಡೆದಿದ್ದಾಳೆ. ನಂತರ ಟಾಯ್ಲೆಟ್​ಗೆ ಹೋಗುವುದಾಗಿ ಹೇಳಿ ಹೊರಟು ಹೋಗಿದ್ದಾಳೆ. ಅದಾದ ಮೇಲೆ ಆಕೆ ನಾಪತ್ತೆಯಾಗಿದ್ದಾಳೆ.

ಈ ವಿಚಾರವಾಗಿ ಚಂದ್ರಶೇಖರ್​ ಕುಟುಂಬ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರು ನವ ವಧುವನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಅವರಿಬ್ಬರು ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲವೆಂದು ಹೇಳಿದ್ದಾರೆ. ದಾಂಪತ್ಯ ಸರಿಮಾಡಲು ಸಾಕಷ್ಟು ಪ್ರಯತ್ನ ಪಟ್ಟ ಪೊಲೀಸರು ವಿಫಲವಾಗಿದ್ದಾರೆ. ಇದೀಗ ಎರಡೂ ಕುಟುಂಬ ದೂರಾಗಿ ಬದುಕಲಾರಂಭಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net