

ಲಖನೌ: ದೇಶದಲ್ಲಿ ಅನ್ಲಾಕ್ ಎರಡನೇ ಹಂತ ನಡೆಯುತ್ತಿದೆ. ಆದರೆ ಕರೊನಾ ಸೋಂಕಿನ ಪ್ರಮಾಣ ಮಾತ್ರ ದಿನೇದಿನೆ ಏರುತ್ತಿದೆ. ಬಹುತೇಕ ರಾಜ್ಯಗಳು ಮತ್ತೆ ಲಾಕ್ಡೌನ್ ದಾರಿ ಕಂಡುಕೊಳ್ಳುತ್ತಿವೆ.
ಇದೀಗ ಆ ಸಾಲಿಗೆ ಉತ್ತರ ಪ್ರದೇಶವೂ ಸೇರಿದೆ. ನಾಳೆಯಿಂದ (ಜು.10) ಜು.13ರವರೆಗೆ ಉತ್ತರ ಪ್ರದೇಶದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ನಲ್ಲಿ ಜಾರಿಯಾಗಲಿದೆ. ಜು.10ರಂದು ಮುಂಜಾನೆಯಿಂದಲೇ ಲಾಕ್ಡೌನ್ ನಿಯಮಗಳು ಜಾರಿಯಾಗಲಿದ್ದು ಈ ಮೂರು ದಿನಗಳ ಅವಧಿಯಲ್ಲಿ ಮಾರ್ಕೆಟ್ಗಳು, ವ್ಯಾಪಾರಿ ಮಳಿಗೆಗಳು, ಎಲ್ಲ ಕಚೇರಿಗಳೂ ಬಂದ್ ಇರಲಿವೆ. ಲಾಕ್ಡೌನ್ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಇದನ್ನೂ ಓದಿ: VIDEO: ಬಾಲಿವುಡ್ ನಟಿ ನೀಡಿದ್ದ ಟಾಸ್ಕ್ ವಿಡಿಯೋ ಮೆಲುಕು ಹಾಕಿದ ಚಾಹಲ್
ಅಗತ್ಯ ಸೇವೆಗಳು ಹಾಗೇ ಮುಂದುವರಿಯಲಿದ್ದು, ರೈಲು ಸಂಚಾರವೂ ಇರಲಿದೆ. ವೈದ್ಯಕೀಯ ಸೇವೆಗಳೂ ಮುಂದುವರಿಯುತ್ತವೆ.
ಹಾಗೇ ಹಳ್ಳಿ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ, ಸರ್ಕಾರಿ ಯೋಜನೆಗಳ ಅನುಷ್ಠಾನ ನಡೆಸಲು ಅನುಮತಿ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ ಒಟ್ಟು 31, 156 ಕೊವಿಡ್-19 ಕೇಸ್ಗಳು ದಾಖಲಾಗಿವೆ. 845 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 20,331 ಚೇತರಿಸಿಕೊಂಡಿದ್ದಾರೆ. ಯುಪಿಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 9,980 ಎಂದು ಅಲ್ಲಿನ ಆರೋಗ್ಯ ಇಲಾಖೆ ವರದಿ ನೀಡಿದೆ.(ಏಜೆನ್ಸೀಸ್)