VIDEO | ಗೂಳಿಗೆ ಹೆದರಿ 2 ಗಂಟೆ ಮರದ ಮೇಲೆಯೇ ಕುಳಿತ ರೈತ!; ವಿಡಿಯೋ ನೋಡಿ ಅಖಿಲೇಶ್​​ ಯಾದವ್ ಹೇಳಿದ್ದೇನು?

chargingbull
Published on

ಉತ್ತರಪ್ರದೇಶ: ಗೂಳಿಯೊಂದು ರೈತನಿಗೆ ಬೆದರಿಕೆ ಹಾಕಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಇರಿಯಲು ಗೂಳಿಯೊಂದು ಓಡಿ ಬಂದಾಗ ಎಚ್ಚೆತ್ತ ರೈತ ಅದರಿಂದ ಪ್ರಾಣ ಉಳಿಸಿಕೊಳ್ಳಲು ಮರಕ್ಕೆ ಜಿಗಿದಿದ್ದಾನೆ.  ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಲ್ಲಿಯಾ ಜಿಲ್ಲೆಯ ರಾಸ್ದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೂಳಿಗೆ ಏನಾಯಿತು ಎಂಬುದು ತಿಳಿದಿಲ್ಲ, ಆದರೆ ಇದುವರೆಗೆ 12 ಜನರನ್ನು ಗಾಯಗೊಳಿಸಿದೆ. ಆದರೆ ಇದೀಗ ಮತ್ತೊಬ್ಬನ್ನು ಗುರಿಯಾಗಿಸಿಕೊಂಡು ಮಾಡಿದ ಅವಾಂತರದ ವಿಡಿಯೋ ವೈರಲ್​​ ಆಗಿದೆ.

ಗೂಳಿ ಜು.28ರಂದು ಖಖ್ನು ಎಂಬ ರೈತನನ್ನು ಅಟ್ಟಿಸಿಕೊಂಡು ಹೋಗಿದೆ. ತಪ್ಪಿಸಿಕೊಳ್ಳಲು ರೈತ ಓಡಿ ಹೋಗಿ ರಸ್ತೆಬದಿಯ ಮರ ಹತ್ತಿದ. ಅವನನ್ನು ಬಿಟ್ಟು ಹೋಗುವುದಿಲ್ಲ ಎಂಬಂತೆ ಅವನು ಯಾವಾಗ ಮರದಿಂದ ಇಳಿಯುತ್ತಾನೆ ಎಂದನ್ನು ಗೂಳಿ ನೋಡುತ್ತಾ ಬರೋಬ್ಬರಿ 2 ಗಂಟೆಗಳ ಕಾಲ ಅಲ್ಲೇ ಕಾದು ನಿಂತಿದೆ.ಗೂಳಿಯ ಭಯದಿಂದ ಗಂಟೆಗಳ ಕಾಲ ಮರದ ಮೇಲೆ ಕುಳಿತಿದ್ದನು. ನಂತರ ಅಲ್ಲೇ ಹತ್ತಿರದಲ್ಲಿದ್ದ ರೈತರು ಬಂದು ಆತನನ್ನು ಕಾಪಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಈ ವಿಚಿತ್ರ ಘಟನೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಖ್ ಯಾದವ್, ಗೂಳಿಗಳನ್ನು ತಡೆಯಲು ಸರ್ಕಾರ ಕ್ರಮಕೈಗೊಳ್ಳಬೇಕು. ಈ ಪ್ರದೇಶದಲ್ಲಿ ಇದುವರೆಗೆ 3,910 ಬಿಡಾಡಿ ಹೋರಿಗಳನ್ನು ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ ರೈತನನ್ನು ಹೆದರಿಸಿದ ಗೂಳಿಯನ್ನು ಹಿಡಿದು ಆರೈಕೆ ಕೇಂದ್ರಕ್ಕೆ ಕೊಂಡೊಯ್ಯಲು ತಂಡವೊಂದು ಈಗಾಗಲೇ ಸ್ಥಳಕ್ಕೆ ಹೋಗಿದ್ದಾರೆ. ಗೂಳಿಗಳನ್ನು ನಿಯಂತ್ರಣದಲ್ಲಿಡಲು ಗೂಳಿ ರಕ್ಷಣಾ ವಿಭಾಗವನ್ನು ಸ್ಥಾಪಿಸುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net