ತಾಲಿಬಾನ್ ಮನಸ್ಥಿತಿ ತೊಲಗಿ ರಾಷ್ಟ್ರೀಯತೆ ಗೆಲ್ಲಬೇಕು ಎಂದಿದ್ದೇಕೆ ಯೋಗಿ ಆದಿತ್ಯನಾಥ್?

yogi adityanath
Published on

ಜೈಪುರ: ದೇಶದಲ್ಲಿ ತಾಲಿಬಾನ್ ಮನಸ್ಥಿತಿ ತೊಲಗಿ ರಾಷ್ಟ್ರೀಯತೆ ಗೆಲ್ಲಬೇಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ರಾಜಸ್ಥಾನ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಪರ ಪ್ರಚಾರಕ್ಕಾಗಿ ರಾಜಸ್ಥಾನಕ್ಕೆ ಆಗಮಿಸಿದ ಅವರು ಅಲ್ವಾರ್‌ನ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಾಲೀಬಾನಿ ಬೆಂಬಲಿತರು, ಅವರ ದುಷ್ಕೃತ್ಯಗಳಿಗೆ ಮಂಗಳ ಹಾಡುವ ಕಾಲ ಸನ್ನಿಹಿತವಾಗಿದೆ. ಇಸ್ರೇಲ್​ ಮೇಲಿನ ದಾಳಿ ಖಂಡಿಸಿದರೆ ನಿಮಗೆ ಸಹಿಸಿಕೊಳ್ಳಲಿಕ್ಕೆ ಆಗುವುದಿಲ್ಲ. ದುಷ್ಕೃತ್ಯವೆಸಗಿ ಗಾಜಾದಲ್ಲಿ ಅಡಗಿ ಕುಳಿತಿರುವ ಹಮಾಸ್​ ಉಗ್ರರನ್ನು ಬೆಂಬಲಿಸುವ ಮನಸ್ಸು ಉಳ್ಳವರು ಭಾರತದ ನಡೆಯನ್ನೂ ಟೀಕಿಸುತ್ತಿದ್ದಾರೆ. ಎಂದು ಹೇಳಿದರು.

'ತಾಲಿಬಾನಿಗಳ ಚಿಕಿತ್ಸೆಯು ಬಜರಂಗಬಲಿಯ ಮಚ್ಚೆಯಾಗಿದೆ.' ‘ತಾಲಿಬಾನ್ ಕಾ ಬಾಜ್ನಾನ ಬಜರಂಗಬಲಿ ಕಾ ಗಾದ ಹಿ ಹೇ.’ ತಾಲಿಬಾನ್ ಮನಸ್ಥಿತಿ ತೊಲಗಿ ರಾಷ್ಟ್ರೀಯತೆ ಗೆಲ್ಲಬೇಕಿದೆ ಎಂದರು.

ಭಜರಂಗಬಲಿಯ ಶಿಕ್ಷೆಯಿಂದ ಯಾರೂ ತಪ್ಪಿಸಿಕೊಳ್ಳಲಾಗದು ಎಂದು ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಯೋಗಿ ಆದಿತ್ಯನಾಥ್ ಅವರು ವಿರೋಧ ಪಕ್ಷಗಳ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಈ ಹಿಂದೆ ಅವರು ಜನೆವರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದೊಂದಿಗೆ ರಾಷ್ಟ್ರೀಯತೆ ಮುನ್ನೆಲೆಗೆ ಹೊರಬರಲಿದೆ ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net