ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ಬಳಿ ನಡೆದಿದ್ದ ಗುಂಡಿನ ದಾಳಿಗೆ ಕಂಟ್ರಿ ಪಿಸ್ತೂಲ್​ ಮಾರಾಟ ಮಾಡಿದ್ದ ಯುವಕನ ಬಂಧನ

BULLET
Published on

ನವದೆಹಲಿ: ಕಂಟ್ರಿ ಪಿಸ್ತೂಲ್​ ಮಾರಾಟ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ 25 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಈತ ಮಾರಿದ ಕಂಟ್ರಿ ಪಿಸ್ತೂಲ್​ ಬಳಕೆಯಾಗಿತ್ತು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರಪ್ರದೇಶದ ಜೇವರ್​ ಸಮೀಪದ ಶಾಜಪುರ ಎಂಬ ಗ್ರಾಮದಲ್ಲಿ ಯುವಕನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಅಜೀತ್​, ಉತ್ತರಪ್ರದೇಶ ವಿವಿಯಲ್ಲಿ ಬಿ.ಇಡಿ ಅಭ್ಯಾಸ ಮಾಡುತ್ತಿದ್ದ.

32 ಕೆ.ಜಿ. ವಿಭಾಗದ ಜೂನಿಯರ್​ ರೆಸ್ಟಲಿಂಗ್​ನಲ್ಲಿ ಚಾಂಪಿಯನ್​ ಆಗಿದ್ದ. ಈತನ ಹಿನ್ನೆಲೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆತನ ಬಂಧನದ ಬಗ್ಗೆ ಕಾನೂನಿನ ರಿತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಶೂಟೌಟ್​ ಪ್ರಕರಣದ ತನಿಖಾ ತಂಡದ ಮುಖ್ಯಸ್ಥ ರಾಜೇಶ್​ ದೇವ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net