ಎಸ್‌ಎಫ್‌ಸಿ ಯೋಜನೆಯಡಿ ಬಂದ ಹಣ ವಿನಿಯೋಗಿಸಿ

24 CRP-1A
ಚನ್ನರಾಯಪಟ್ಟಣ ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಶಾಸಕ ಎನ್.ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಸಿ.ಎನ್.ಮೋಹನ್, ರಾಣಿಕೃಷ್ಣ ಇದ್ದರು.
Published on

ಚನ್ನರಾಯಪಟ್ಟಣ: ಎಸ್‌ಎಫ್‌ಸಿ ಯೋಜನೆಯಡಿ ಪುರಸಭೆಗೆ 1.19 ಕೋಟಿ ರೂ. ಅನುದಾನ ಬಂದಿದ್ದು, ಸರ್ಕಾರದ ಸೂಚನೆಯಂತೆ ವಿನಿಯೋಗ ಮಾಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸೂಚಿಸಿದರು.

ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಈ ಹಣದಲ್ಲಿ 47.6 ಲಕ್ಷ ರೂ.ಗಳನ್ನು ಅನಿರ್ಬಂಧಿತ ಅನುದಾನದಡಿ ಹಾಗೂ 71.40 ಲಕ್ಷ ರೂ. ಗಳನ್ನು ನಿರ್ಬಂಧಿತ ಅನುದಾನದಡಿ ಖರ್ಚು ಮಾಡಬೇಕು ಎಂದು ನಿರ್ದೇಶನ ನೀಡಿದರು.

ನಿರ್ಬಂಧಿತ ಅನುದಾನದಡಿ ಇರುವ 71.4 ಲಕ್ಷ ರೂ.ಗಳಲ್ಲಿ ಶೇ.50ಅನ್ನು ಕಸ ವಿಲೇವಾರಿ ಘಟಕಕ್ಕೆ ನೀಡಬೇಕು ಎಂದು ಪರಿಸರ ಇಂಜಿನಿಯರ್ ಸಭೆಯ ಗಮನ ಸೆಳೆದಾಗ ಯಾವ್ಯಾವ ಕಾಮಗಾರಿಗಳಿಗೆ ಅದನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಎಲ್ಲ ಸದಸ್ಯರಿಗೆ ಇರಬೇಕು. ಅಧಿಕಾರಿಗಳು ಮಾತ್ರ ಕಚೇರಿಯಲ್ಲಿ ಕುಳಿತು ಹಣದ ಹಂಚಿಕೆ ಮಾಡುವುದು ಸರಿಯಲ್ಲ ಎಂದು ಸದಸ್ಯ ಎಚ್.ಎನ್.ನವೀನ್ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಇದೇ ರೀತಿ ಆಗಿದ್ದು. ಅದು ಪುನರಾವರ್ತನೆಯಾಗಬಾರದು ಎಂದು ಹೇಳಿದರು.

ಮುಕ್ತ ಅನುದಾನದಡಿ ಇರುವ 47 ಲಕ್ಷ ರೂ.ಗಳನ್ನು ನೀರು ಸರಬರಾಜು, ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ ವ್ಯವಸ್ಥೆ, ರಸ್ತೆ, ಸೇತುವೆ, ಪಾದಚಾರಿ ಮಾರ್ಗ, ಮಳೆನೀರು ಚರಂಡಿ, ಬೀದಿ ದೀಪ, ಉದ್ಯಾನ, ಸ್ಮಶಾನ, ಬಸ್ ನಿಲ್ದಾಣ, ಶೌಚಗೃಹ, ಪ್ರಚಾರ ಅಭಿಯಾನ, ಕೊಳೆಗೇರಿ ಸುಧಾರಣೆ, ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ, ನಗರ ಬಡತನ ನಿರ್ಮೂಲನೆ, ನಗರ ಯೋಜನೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವಂತೆ ಸೂಚನೆಯಿದೆ ಎಂದರು.

ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಫರ್ಹಾಅನ್ನು, ಮುಖ್ಯಾಧಿಕಾರಿ ಕೆ.ಎನ್.ಹೇಮಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net