

ಬೆಂಗಳೂರು: ನಾನು ಮಂಗಳೂರಿಗೆ ಹೋಗುವಾಗ ಬರುವಾಗ ಮಾರ್ಗ ಮಧ್ಯದ ಒಂದು ಗೂಡಂಗಡಿಯಲ್ಲಿ ಕಾಯಂ ಆಗಿ ಚಹಾ ಕುಡಿಯುತ್ತಿದ್ದೆ. ಸ್ಪೀಕರ್ ಆದ ಮೇಲೆ ಅಲ್ಲಿಗೆ ಹೋಗಲು ಆಗಿರಲಿಲ್ಲ. ಮೊನ್ನೆ ಗೂಡಂಗಡಿಯವನು ೆನ್ ಮಾಡಿ ಕರೆದಾಗ ಹೋದೆ. ಆದರೆ ನಾನು ಹೋಗುವುದಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ಅಲ್ಲಿ ಭದ್ರತಾ ಸಿಬ್ಬಂದಿ ಹಾಜರಿದ್ದರು. ಇದರಿಂದಾಗಿ ಹೋಟೆಲ್ ಬಳಿ ಪೊಲೀಸರಿರುವ ಕಾರಣಕ್ಕೆ ಯಾವ ಲಾರಿಯೂ ನಿಲ್ಲಿಸದೇ ಹೋಗಿದ್ದವು. ನನ್ನ ಭೇಟಿಯಿಂದ ಗೂಡಂಗಡಿ ಮಾಲೀಕನಿಗೆ ಲಾಸ್ ಆಗಿತ್ತು ಎಂದು ಸ್ಪೀಕರ್ ತಮ್ಮ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ಅದರೂ ಜನ ಸಾಮಾನ್ಯರ ಜತೆ ನಿಕಟ ಸಂಪರ್ಕಕ್ಕೇ ನನ್ನ ಮೊದಲ ಆದ್ಯತೆ ಎಂದು ಹೇಳಿದರು.