

Viral vedeo| ಏಪ್ರಿಲ್ 20 ರಂದು ವಿಶ್ವಾದ್ಯಂತ ಕ್ರಿಶ್ಚಿಯನ್ ಹಬ್ಬವಾದ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಸಂಬಂಧಿಸಿದ ಅನೇಕ ಸಂಪ್ರದಾಯಗಳು ಇವೆ. ಅದರಲ್ಲಿ ಮೊಟ್ಟೆಗಳಿಗೆ ಬಣ್ಣ ಹಚ್ಚುವುದು ಬಹಳ ಮುಖ್ಯವಾದ ಆಚಾರವಾಗಿದೆ. ಇದನ್ನ ಈಸ್ಟರ್ ಎಗ್‌ಗಳು ಎಂದು ಸಹ ಕರೆಯಲಾಗುತ್ತದೆ. ಅಂದಹಾಗೆ ಇಲ್ಲೊಬ್ಬ ಮಹಿಳೆ ಮೊಟ್ಟೆಗೆ ಬಣ್ಣ ಹಚ್ಚಲು ಟಾಯ್ಲೆಟ್ ಬೌಲ್ನ್ನು ಬಳಸಿದ್ದಾಳೆ.
(@katewilltryanything) ಎಂಬ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನೂ ಈ ವಿಡಿಯೋದಲ್ಲಿ ಆ ಮಹಿಳೆ ಮೊಟ್ಟೆಗಳನ್ನು ತೆಗೆದುಕೊಂಡು ಟಾಯ್ಲೆಟ್ ಬೌಲ್ ಒಳಗೆ ಹಾಕುವುದನ್ನು ನೀವು ಗಮನಿಸಬಹುದಾಗಿ. ನಂತರ ಅದಕ್ಕೆ ಅಡಿಗೆ ಸೋಡಾ, ಗ್ಯಾಲನ್ ವಿನೆಗರ್, ವರ್ಣರಂಜಿತ ಬಣ್ಣವನ್ನು ಸೇರಿಸುತ್ತಾಳೆ. ಈ ವೀಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, 5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
(ಏಜೆನ್ಸೀಸ್)
ಇನ್ನೂ ಈ ವಿಡಿಯೋ ವೀಕ್ಷಿಸಿದ ಜನರು ಒಬ್ಬೊಬ್ಬರೂ ಕೂಡ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅನೇಕರು ಶೌಚಾಲಯದಲ್ಲಿ ಏಕೆ ಇದನ್ನು ಮಾಡಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾನು ನೋಡಿದ ಅತ್ಯಂತ ಕೆಟ್ಟ ವೀಡಿಯೊ ಎಂದು ಬರೆದುಕೊಂಡಿದ್ದಾರೆ. ಇನ್ನೂ ಹಲವರು ಇದು ತುಂಬಾ ಅಸಹ್ಯಕರ ಕೆಲಸ ಎಂದು ಆ ಮಹಿಳೆಯನ್ನ ಟೀಕಿಸಿದ್ದಾರೆ.