ನೀವು ಕೂಡ ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಕೊಡುವ ಆಹಾರ ತಿನ್ನುತ್ತೀರಾ? ಹಾಗಿದ್ರೆ ಇದು ಎಷ್ಟು ಅಪಾಯಕಾರಿ ಗೊತ್ತಾ| aluminumfoil

blank

aluminumfoil | ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯ ಅಡುಗೆಮನೆಯಲ್ಲೂ ಸಹ ಈ ಅಲ್ಯೂಮಿನಿಯಂ ಫಾಯಿಲ್ ಬಳಕೆ ಮಾಡಲಾಗ್ತಾ ಇದೆ. ಜೊತೆಗೆ ಹೋಟೆಲ್​ಗಳಲ್ಲಿನ ಟಿಫನ್ ಪ್ಯಾಕಿಂಗ್, ರೊಟ್ಟಿಗಳನ್ನು ಸುತ್ತಿಕೊಡಲು, ಅಥವಾ ಉಳಿದ ಆಹಾರವನ್ನು ಮುಚ್ಚವುದಕ್ಕೂ ಸಹ ಈ ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಲಾಗುತ್ತದೆ. ಆದರೆ ತೆಳುವಾದ ಅಲ್ಯೂಮಿನಿಯಂನಿಂದ ಕೂಡಿದ ಈ ಬೆಳ್ಳಿ ಬಣ್ಣದ ಹಾಳೆ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಯಾಕಾರಿ ಎಂಬುದನ್ನು ತಿಳಿಯೋಣ ಬನ್ನಿ.

blank

ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರ ಪ್ರಕಾರ, ಅಲ್ಯೂಮಿನಿಯಂ ಫಾಯಿಲ್ ಅನ್ನು ಸರಿಯಾಗಿ ಬಳಸದಿದ್ದರೆ, ಅದು ದೇಹಕ್ಕೆ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾಹ್ಯಾಕಾಶದಿಂದ ಭೂಮಿಯ ಸೌಂದರ್ಯ ಸೆರೆ ಹಿಡಿದ ISS; ವಿದ್ಯುತ್ ಬೆಳಕಿನಲ್ಲಿ ಭಾರತ ಹೇಗೆ ಕಾಣಿಸುತ್ತೆ ನೋಡಿ| Earth

ಆರೋಗ್ಯದ ಮೇಲಾಗುವ ಪರಿಣಾಮಗಳೇನು?

1. ಮಾನಸಿಕ ಕಾಯಿಲೆಗಳು

ಅಲ್ಯೂಮಿನಿಯಂಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ನಮ್ಮ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಅಲ್ಯೂಮಿನಿಯಂ ಅಧಿಕವಾಗಿ ಸಂಗ್ರಹವಾಗುವುದರಿಂದ ಆಲ್ಝೈಮರ್ ನಂತಹ ನರವೈಜ್ಞಾನಿಕ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ. ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಆಹಾರವನ್ನು ಸಂಗ್ರಹಿಸುವುದರಿಂದ, ಈ ಅಂಶವು ನಿಧಾನವಾಗಿ ಆಹಾರದಲ್ಲಿ ಬೆರೆತು ನಿಮ್ಮ ಆರೋಗ್ಯದ ಮೇಲೆ ತೀವೃ ಸಮಸ್ಯೆಯನ್ನುಂಟು ಮಾಡುತ್ತದೆ ಎನ್ನಲಾಗಿದೆ.

2. ಕ್ಯಾನ್ಸರ್ ಅಪಾಯ

ಕೆಲವು ವೈಜ್ಞಾನಿಕ ಸಂಶೋಧನೆಗಳು ಅಲ್ಯೂಮಿನಿಯಂಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಡಿಎನ್‌ಎ ಹಾನಿಯಾಗುತ್ತದೆ, ಇದು ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಇನ್ನೂ ಇದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ.

ನೀವು ಕೂಡ ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಕೊಡುವ ಆಹಾರ ತಿನ್ನುತ್ತೀರಾ? ಹಾಗಿದ್ರೆ ಇದು ಎಷ್ಟು ಅಪಾಯಕಾರಿ ಗೊತ್ತಾ| aluminumfoil

3. ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆ

ದೇಹದಲ್ಲಿ ಹೆಚ್ಚುವರಿ ಅಲ್ಯೂಮಿನಿಯಂ ಸಂಗ್ರಹವಾದಾಗ, ಅದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆಯಬಹುದು. ಇದರಿಂದಾಗಿ ಮೂಳೆಗಳು ಕ್ರಮೇಣ ದುರ್ಬಲವಾಗುತ್ತವೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವು ಹೆಚ್ಚಾಗುತ್ತದೆ, ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರು ಇದರಿಂದಾಗಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

4. ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ

ಆಹಾರವನ್ನು ಫಾಯಿಲ್‌ನಲ್ಲಿ ಸಂಗ್ರಹಿಸುವುದರಿಂದ ಅಥವಾ ಬೇಯಿಸುವುದರಿಂದ, ವಿಶೇಷವಾಗಿ ಆಮ್ಲೀಯ ಆಹಾರಗಳು (ಟೊಮ್ಯಾಟೊ, ನಿಂಬೆಹಣ್ಣು, ಉಪ್ಪಿನಕಾಯಿ), ಸಣ್ಣ ಅಲ್ಯೂಮಿನಿಯಂ ಕಣಗಳು ಆಹಾರದಲ್ಲಿ ಬೆರೆಯಬಹುದು. ಇದು ಹೊಟ್ಟೆಯ ಅನಿಲ, ಆಮ್ಲೀಯತೆ, ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು:

ಇದನ್ನೂ ಓದಿ: ಮೊದಲ ಮಳೆಗೆ ಮಣ್ಣಿನ ಸುವಾಸನೆ ಏಕೆ ಬರುತ್ತೆ ಗೊತ್ತಾ? Rain

ಆಹಾರವನ್ನು ಸಂಗ್ರಹಿಸಲು ಗಾಜಿನ ಅಥವಾ ಉಕ್ಕಿನ ಪಾತ್ರೆಗಳನ್ನು ಬಳಸಿ.
ಬಿಸಿ ಅಥವಾ ಆಮ್ಲೀಯ ಆಹಾರವನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸಂಗ್ರಹಿಸಬೇಡಿ.
ವಿಶೇಷವಾಗಿ ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಮಕ್ಕಳಿಗೆ ಟಿಫಿನ್‌ನಲ್ಲಿ ಕೊಡಬೇಡಿ.
ತಣ್ಣನೆಯ ಮತ್ತು ಒಣಗಿದ ವಸ್ತುಗಳನ್ನು ಇಡಲು ಮಾತ್ರ ಫಾಯಿಲ್ ಬಳಸಿ.
(ಏಜೆನ್ಸೀಸ್)
ಸೂಚನೆ: ಸುದ್ದಿಯಲ್ಲಿ ನೀಡಲಾದ ಕೆಲ ಮಾಹಿತಿ ಮಾಧ್ಯಮ ವರದಿಗಳನ್ನು ಆಧರಿಸಿವೆ. ಯಾವುದೇ ಸಲಹೆಯನ್ನು ಕಾರ್ಯಗತಗೊಳಿಸುವ ಮೊದಲು, ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.

ಬಾಹ್ಯಾಕಾಶದಿಂದ ಭೂಮಿಯ ಸೌಂದರ್ಯ ಸೆರೆ ಹಿಡಿದ ISS; ವಿದ್ಯುತ್ ಬೆಳಕಿನಲ್ಲಿ ಭಾರತ ಹೇಗೆ ಕಾಣಿಸುತ್ತೆ ನೋಡಿ| Earth

Share This Article
blank

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

blank