ಬಾಹ್ಯಾಕಾಶದಿಂದ ಭೂಮಿಯ ಸೌಂದರ್ಯ ಸೆರೆ ಹಿಡಿದ ISS; ವಿದ್ಯುತ್ ಬೆಳಕಿನಲ್ಲಿ ಭಾರತ ಹೇಗೆ ಕಾಣಿಸುತ್ತೆ ನೋಡಿ| Earth

earth
Published on

Earth: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS) ಇಂದು (13) ಮುಂಜಾನೆ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಕೆಲವು ಅದ್ಭುತ ಫೋಟೋಗಳನ್ನು ಬಿಡುಗಡೆ ಮಾಡಿದೆ. ಭಾರತ, ಅಮರಿಕ ಸೇರಿದಂತೆ ನಾಲ್ಕು ದೇಶಗಳು ರಾತ್ರಿ ವೇಳೆ ಹೇಗೆ ಕಾಣಿಸುತ್ತವೆ ಎಂಬ ಫೋಟೋವನ್ನು ಸೆರೆ ಹಿಡಿದು ಕಳುಹಿಸಿದೆ. ಅದರಲ್ಲಿ ಭಾರತದ ದೃಶ್ಯ ಮಾತ್ರ ತುಂಬಾ ಅದ್ಭುತವಾಗಿ ಕಂಡುಬಂದಿದೆ.

ಸೂರ್ಯನ ಬೆಳಕಿನಲ್ಲಿ ಹಾಗೂ ರಾತ್ರಿ ವೇಳೆ ಭೂಮಿ ಹೇಗೆ ಕಾಣುತ್ತದೆ ಎನ್ನುವ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಉಪಗ್ರಹ ಕಳುಹಿಸಿ ಕೊಟ್ಟಿದೆ. ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಾಲ್ಕು ದೇಶಗಳು ಕತ್ತಲಲ್ಲಿ ಹೇಗೆ ಕಾಣುತ್ತದೆ ಅನ್ನೋ ಫೋಟೋವನ್ನು ಕಳುಹಿಸಿದ್ದು, ಅದರಲ್ಲಿ ಕೆನಡಾ, ಅಮೆರಿಕ, ಭಾರತ, ಹಾಗೂ ದಕ್ಷಿಣ ಏಷ್ಯಾ ದೇಶಗಳ ಫೋಟೋವನ್ನು ಬಿಡುಗಡೆ ಮಾಡಿದೆ.

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ?

ಅಂದಹಾಗೆ ಪೋಸ್ಟ್‌ಗಳಲ್ಲಿ ತೋರಿಸಿರುವ ಎಲ್ಲಾ ಸ್ಥಳಗಳಿಗಿಂತ ಭಾರತೀಯ ನಗರದ ದೀಪಗಳು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಕಾಣಬಹುದು. ಇದು ಬಹುಶಃ ದೇಶದಲ್ಲಿ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯನ್ನು ಸೂಚಿಸುತ್ತದೆ. ಭಾರತದ ಚಿತ್ರಣವು ನಗರಗಳ ದೀಪಗಳನ್ನು ತೋರಿಸುತ್ತದೆ ಮತ್ತು ದೇಶದ ದಟ್ಟವಾದ ಜನಸಂಖ್ಯೆಯನ್ನು ಸಹ ಎತ್ತಿ ತೋರಿಸುತ್ತದೆ. ರಾತ್ರಿ ಆಕಾಶದ ವಿರುದ್ಧವಾಗಿ, ಪ್ರಕಾಶಮಾನವಾಗಿ ಹೊಳೆಯುವ, ಮಂದ ಬೆಳಕಿನ ಪ್ರದೇಶಗಳಿಂದ ಕೂಡಿದ ಬೆಳಕಿನ ಸಮೂಹಗಳು ಗೋಚರಿಸುತ್ತವೆ. ಹಲವು ದೇಶಗಳನ್ನು ಒಟ್ಟೂಗೂಡಿಸಿ ತೆಗೆದ ಫೋಟೋ ಇದಾಗಿದೆ. ಆದರೂ ಭಾರತವೇ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಿದೆ. ಇಷ್ಟೇ ಅಲ್ಲ ಭಾರತ ಅಕ್ಷರಶ ರಾತ್ರಿ ವೇಳೆಯ ಆಕಾಶವನ್ನೇ ಹೋಲುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ಏಜೆನ್ಸೀಸ್)

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವು ವಿವಿಧ ದೇಶಗಳ ಹಲವಾರು ಗಗನಯಾತ್ರಿಗಳನ್ನು ಹೊಂದಿದೆ. ಎಲ್ಲರೂ ವಿಜ್ಞಾನ ಮತ್ತು ಮಾನವೀಯತೆಯ ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಕೇಂದ್ರ ನಿಯಮಿತವಾಗಿ ಬಾಹ್ಯಾಕಾಶದಿಂದ ದೃಶ್ಯಗಳನ್ನು ಹಂಚಿಕೊಳ್ಳುತ್ತದೆ ಹಾಗೂ ಇದು ನಮ್ಮ ಗ್ರಹದ ಸೌಂದರ್ಯವನ್ನು ಎಲ್ಲರಿಗೂ ತೋರಿಸುವ ಉದ್ದೇಶವನ್ನೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net