ಟಿವಿ ನೋಡುತ್ತಿದ್ದಾಗ ಹೃದಯಾಘಾತವಾಗಿ ಖ್ಯಾತ ಸಿಂಗರ್​ ಉಷಾ ಉತ್ತುಪ್ ಪತಿ ನಿಧನ

ushauthups
Published on

ಕೋಲ್ಕತ್ತಾ: ಗಾಯಕಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೊ ಉತ್ತುಪ್ (78) ಸೋಮವಾರ ಕೋಲ್ಕತ್ತಾದಲ್ಲಿ ನಿಧನರಾದರು. ರಾತ್ರಿ ಮನೆಯಲ್ಲಿಯೇ ಅವರಿಗೆ ಹೃದಯಾಘಾತವಾಗಿತ್ತು.

ವರದಿಯ ಪ್ರಕಾರ, ಜಾನಿ ಅವರು ಟಿವಿ ನೋಡುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಇಂದು ಜಾನಿ ಚಾಕೊ ಉತ್ತುಪ್ ಅಂತ್ಯಕ್ರಿಯೆ ನಡೆಯಲಿದೆ.

70ರ ದಶಕದಲ್ಲಿ ಟೀ ಪ್ಲಾನ್ಟೇಶನ್​ನಲ್ಲಿ ಜಾನಿ ಚಾಕೊ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರನ್ನು ​ಉಷಾ ಉತ್ತುಪ್​ ಭೇಟಿಯಾದರು. ಬಳಿಕ ಈ ಜೋಡಿ ವಿವಾಹವಾದರು. ಜಾನಿ ಚಾಕೊ ಉತ್ತುಪ್ ಅವರು ಉಷಾ ಉತ್ತುಪ್ ಅವರು ತಮ್ಮ ಪುತ್ರ ಸನ್ನಿ ಮತ್ತು ಮಗಳು ಅಂಜಲಿಯನ್ನು ಅಗಲಿದ್ದಾರೆ.  

ಅಂಜಲಿ ಉತ್ತುಪ್ ಅವರು ತಮ್ಮ ತಂದೆಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. "ಅಪ್ಪಾ...ತುಂಬಾ ಬೇಗ ಹೋದರು...ಆದರೆ ನೀವು ಬದುಕಿರುವಷ್ಟು ದಿನ ಸೊಗಸಾಗಿ...ಜಗತ್ತಿನ ಅತ್ಯಂತ ಸುಂದರ ವ್ಯಕ್ತಿಯಾಗಿದ್ದೀರ...ನಾವು ನಿಮ್ಮನ್ನು ನಿಜವಾದ ಸಂಭಾವಿತ ವ್ಯಕ್ತಿ ಮತ್ತು ಲಾರೆನ್ಸಿಯನ್ ಟು ದಿ ಕೋರ್ ಮತ್ತು ಫೈನೆಸ್ಟ್ ಟೀ ಟೇಸ್ಟರ್ ಅನ್ನು ಪ್ರೀತಿಸುತ್ತೇವೆ." ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net